ಶನಿವಾರಸಂತೆ, ಜೂ. ೨೨: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗೌಡಳ್ಳಿ ಸಮೀಪದ ಕೆ.ಜಿ. ರಮೇಶ್ (೩೪) ಮೃತ ದುರ್ದೈವಿ.

ಮೃತ ಉಮೇಶ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ತಾ.೨೧ರಂದು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ತಾ. ೨೨ರಂದು ಮೃತಪಟ್ಟಿದ್ದಾರೆ.

ಕೋಟೆಯೂರು ಗ್ರಾಮದ ಕಾರ್ಪೆಂಟರ್ ಜನಾರ್ದನ ಪೂಜಾರಿ ಅವರ ಪುತ್ರ ಉಮೇಶ್, ಪತ್ನಿ - ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ತಾ. ೨೧ರಂದು ಕೋಟೆಯೂರಿನಲ್ಲಿ ತಮ್ಮ ಸ್ವಂತ ಮನೆಯ ರಿಪೇರಿ ಕೆಲಸಕ್ಕೆ ಬಂದು ಸಂಜೆ ವೇಳೆ ಕಳೆನಾಶಕ ಸೇವಿಸಿದ್ದರು. ತಕ್ಷಣ ಅವರನ್ನು ಸೋಮವಾರಪೇಟೆ, ಮಡಿಕೇರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಸುಳ್ಯಕ್ಕೆ ರವಾನಿಸಲಾಗಿತ್ತು.

ಉಮೇಶ್‌ಗೆ ಹೊಟ್ಟೆ ನೋವಿನ ಕಾಯಿಲೆಯಿದ್ದು ವಿಷ ಸೇವಿಸಿ ಮೃತಪಟ್ಟಿರುವುದಾಗಿ ಸಹೋದರ ಕೆ.ಜಿ. ಅಶೋಕ್ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.