ಮಡಿಕೇರಿ, ಜೂ. ೨೨: ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದಿಂದ ೨೦೨೨-೨೩ನೇ ಸಾಲಿಗೆ ಕಾಯಕಕಿರಣ ಹಾಗೂ ಸ್ವ ಸಹಾಯ ಸಂಘಗಳಿಗೆ ಉತ್ತೇಜನ ಯೋಜನೆಯಡಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಕಾಯಕಕಿರಣ ಯೋಜನೆಯಡಿ ೪೭ ಗುರುತಿಸಿರುವ ವೃತ್ತಿ ಕುಲಕಸುಬುದಾರರು ಮತ್ತು ಕುಶಲಕರ್ಮಿಗಳಿಗೆ ರೂ. ೧ ಲಕ್ಷಗಳವರೆಗೆ ಸಹಾಯಧನ ಮತ್ತು ಸಾಲದ ಸೌಲಭ್ಯವನ್ನು ನಿಗಮದಿಂದ ಒದಗಿಸಲಾಗುವುದು. ಕರಕುಶಲ ವೃತ್ತಿಗಳಿಗೆ ಮಾತ್ರ ಈ ಯೋಜನೆಯಲ್ಲಿ ಸೌಲಭ್ಯ ಪಡೆಯಬಹುದು. ಕುಶಲಕರ್ಮಿಗಳು ವೃತ್ತಿಗಳಲ್ಲದೆ ಇತರೆ ಉದ್ದೇಶಗಳಿಗೆ ಆರ್ಥಿಕ ನೆರವನ್ನು ಈ ಯೋಜನೆಯಲ್ಲಿ ಪಡೆಯಲು ಅವಕಾಶವಿರುವುದಿಲ್ಲ.

ಸ್ವಸಹಾಯ ಸಂಘಗಳಿಗೆ ಉತ್ತೇಜನ ಯೋಜನೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ಸ್ವ ಸಹಾಯ ಸಂಘಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಮತ್ತು ಸಹಾಯಧನವನ್ನು ಒದಗಿಸಲಾಗುವುದು.

ಈ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವ ಫಲಾಪೇಕ್ಷಿಗಳು ಉಚಿತವಾಗಿ ಅರ್ಜಿ ನಮೂನೆಯನ್ನು ನಿಗಮದ ವೆಬ್‌ಸೈಟ್ ತಿತಿತಿ.ಞvಟಜಛಿಟ.ಞಚಿಡಿಟಿಚಿಣಚಿಞಚಿ.gov.iಟಿ ನಿಂದ ಡೌನ್‌ಲೋಡ್ ಮಾಡಿ ದಾಖಲೆಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ, ಮಡಿಕೇರಿಯ ಜಿಲ್ಲಾ ಕಚೇರಿಗೆ ಜುಲೈ ೨೮ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಅಥವಾ ದೂ. ೦೮೨೭೨-೨೨೧೬೫೬ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ನೆಲದ ಹಾಸುಗಳ ಪರಿಕರಗಳನ್ನು ವಿತರಿಸಲು

೨೦೨೨-೨೩ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ ೨೦೨೩ ರಡಿ ಬಳಕೆಯಾಗದೇ ಇರುವ ಮೊತ್ತ್ತದಡಿ ೨ ರಬ್ಬರ್ ನೆಲದ ಹಾಸುಗಳ ಪರಿಕರಗಳನ್ನು ವಿತರಿಸಲು ಪರಿಶಿಷ್ಟ ಜಾತಿಯ ೩, ಪರಿಶಿಷ್ಟ ಪಂಗಡದ ೧೦ ಫಲಾನುಭವಿಗಳಿಗೆ ಶೇ. ೯೦ ರಷ್ಟು ಸಹಾಯಧನದಡಿ (ಘಟಕ ವೆಚ್ಚ ರೂ.೬,೧೯೦ ಸಹಾಯಧನ ರೂ. ೫,೫೭೧ ಫಲಾನುಭವಿಗಳಿಗೆ ವಂತಿಗೆ ರೂ.೬೧೯) ಕಾರ್ಯಕ್ರಮವನ್ನು ಅನುಷ್ಟಾನ ಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ. ೨೦೨೨-೨೩ ನೇ ಸಾಲಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ೧೦,೬೦೦ ನಾಟಿ ಕೋಳಿ ಮರಿಗಳನ್ನು ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಐದು ವಾರದ ತಲಾ ೨೦ ನಾಟಿ ಕೋಳಿಮರಿಗಳನ್ನು ಉಚಿತವಾಗಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಫಲಾನುಭವಿಗಳು ಸರ್ಕಾರದ ಮಾರ್ಗ ಸೂಚಿಯನ್ವಯ ಈ ಯೋಜನೆಯ ಪ್ರಯೋಜನವನ್ನು ಪೆಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಮಡಿಕೇರಿ ೯೪೪೮೬೪೭೨೭೬, ವೀರಾಜಪೇಟೆ ೯೧೪೧೦೯೩೯೯೬, ಪೊನ್ನಂಪೇಟೆ ೯೪೪೯೦೮೧೩೪೩, ಸೋಮವಾರಪೇಟೆ ೯೪೪೮೬೫೫೬೬೦, ಕುಶಾಲನಗರ-೮೯೫೧೪೦೪೦೨೫ ಇವರನ್ನು ಸಂಪರ್ಕಿಸಬಹುದು. ಅರ್ಜಿಗಳನ್ನು ಭರ್ತಿ ಮಾಡಿ ಜುಲೈ ೧೦ ರೊಳಗೆ ಸಂಬAಧಿಸಿದ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ. ಪಿ. ಸುರೇಶ್ ಭಟ್ ತಿಳಿಸಿದ್ದಾರೆ.

ಸ್ವಯಂ ಉದ್ಯೋಗ ಸಾಲ ಯೋಜನೆ

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನ ಆಗುತ್ತಿರುವ ಸ್ವಯಂ ಉದ್ಯೋಗ ಸಾಲ ಮತ್ತು ಸಹಾಯಧನ ಯೋಜನೆ(ಆನ್‌ಲೈನ್) ಮತ್ತು ಅರಿವು ಶೈಕ್ಷಣಿಕ ಸಾಲ ನವೀಕರಣ (ಆನ್‌ಲೈನ್) (೩ ಮತ್ತು ೪ನೇ ಕಂತು) ಯೋಜನೆಗಳಡಿ ಸೌಲಭ್ಯ ಪಡೆಯಬಯಸುವ, ಸರ್ಕಾರದ ಆದೇಶದಂತೆ ಪ್ರವರ್ಗ-೧ರ ೬(ಎ) ರಿಂದ ೬(ಎಕೆ) ವರೆಗಿನ ಬೆಸ್ತ, ಕೋಲಿ, ಅಂಬಿಗ, ಕಬ್ಬಲಿಗ ಮತ್ತಿತರ ಜಾತಿ/ಉಪ ಜಾತಿಗಳಿಗೆ ಸೇರಿದ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕೇಂದ್ರ ಆಧಾರ್ ಅಧಿನಿಯಮ ೨೦೧೬ ಸೆಕ್ಷನ್(೭) ರಡಿ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅರ್ಜಿದಾರರ ಹೆಸರು, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಒಂದೇ ರೀತಿಯಲ್ಲಿರಬೇಕು (ಹೊಂದಾಣಿಕೆಯಾಗಿರಬೇಕು). ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಚಾಲ್ತಿಯಲ್ಲಿರಬೇಕು. ನಿಗಮದ/ ಸರ್ಕಾರದ ಯಾವುದಾದರೂ ಯೋಜನೆಗಳಡಿ ಕುಟುಂಬದ ಯಾರೇ ಆಗಲಿ ಈಗಾಗಲೇ ಯೋಜನಾ ಸೌಲಭ್ಯ ಪಡೆದಿದ್ದಲ್ಲಿ ಅಂತವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. ಸರ್ಕಾರ/ ನಿಗಮವು ಕಾಲಕಾಲಕ್ಕೆ ವಿಧಿಸುವ ಇನ್ನಿತರ ಅರ್ಹತೆ, ನಿಬಂಧನೆಗಳನ್ನು ಹೊಂದಿದವರಾಗಿರಬೇಕು.

suviಜhಚಿ.ಞಚಿಡಿಟಿಚಿಣಚಿಞಚಿ.gov.iಟಿ ತಂತ್ರಾAಶದ (ಆನ್‌ಲೈನ್) ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕಾಗಿದ್ದು, ಹೆಚ್ಚಿನ ಮಾಹಿತಿಗೆ ಕೊಡಗು ಜಿಲ್ಲೆಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ. ೦೮೨೭೨-೨೨೧೬೫೬ ಅಥವಾ ನಿಗಮದ ವೆಬ್‌ಸೈಟ್ hಣಣಠಿs://ಚಿmbigಚಿಡಿಚಿಜeveಟoಠಿmeಟಿಣ.ಞಚಿಡಿಟಿಚಿಣಚಿಞಚಿ.gov.iಟಿ ಸಂಪರ್ಕಿಸಬಹುದು. ಸುವಿಧಾ ತಂತ್ರಾAಶದ ಮೂಲಕ ಅರ್ಜಿ ಸಲ್ಲಿಸಲು ಜುಲೈ ೧೪ ರ ಸಂಜೆ ೫.೩೦ ಗಂಟೆ ಕೊನೆಯ ದಿನವಾಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಮಹದೇವಿ ಅವರು ತಿಳಿಸಿದ್ದಾರೆ.