*ಗೋಣಿಕೊಪ್ಪ, ಜೂ. ೨೨: ಬಿಜೆಪಿ ವೀರಾಜಪೇಟೆ ಮಂಡಲದ ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ಶಶಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಅವರು ಆಯ್ಕೆಯಾಗಿದ್ದಾರೆ. ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಸೂಚನೆಯಂತೆ ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್ ಆದೇಶ ಸೂಚನೆಯನ್ನು ನೀಡಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಕಾರ್ಯದರ್ಶಿಗಳಾಗಿ ಸುಶೀಲಾ, ದೊರೆ, ನಾಗರಾಜು, ಪ್ರಸಾದ್, ಚೇತನ್, ಉಪಾಧ್ಯಕ್ಷರು ಗಳಾಗಿ ದಿನೇಶ್, ಚಂದ್ರು, ಕೌಶನ್, ಕೋಶಾಧಿಕಾರಿಯಾಗಿ ಮಂಜು ಆಯ್ಕೆಯಾಗಿದ್ದಾರೆ.