ಗೋಣಿಕೊಪ್ಪ ವರದಿ, ಜೂ. ೨೨: ದುರ್ಗಾಬೋಜಿ ಸಭಾಂಗಣದಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ಆಡಳಿತ ಮಂಡಳಿ ಸದಸ್ಯರುಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷರಾಗಿ ಡಾ. ಅಮ್ಮಂಡ ಚಿಣ್ಣಪ್ಪ, ಕಾರ್ಯದರ್ಶಿ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ, ಉಪಾಧ್ಯಕ್ಷ ಪ್ರಣಿತ ಪೂಣಚ್ಚ, ಎಂ. ಜಿ. ರಾಕೇಶ್, ಎಲ್‌ಸಿಐಎಫ್ ಸಂಚಾಲಕ ಪಿ. ಎಂ. ಜೀವನ್, ಖಜಾಂಚಿ ಸಿ. ಟಿ. ಅಪ್ಪಣ್ಣ, ಕ್ಲಬ್ ಸರ್ವಿಸ್ ಮುಖ್ಯಸ್ಥ ಧನು ಉತ್ತಯ್ಯ, ಸದಸ್ಯತ್ವ ಘಟಕ ಮುಖ್ಯಸ್ಥ ಡಾ. ಸೂರಜ್ ಉತ್ತಪ್ಪ, ಕಮ್ಯೂನಿಕೇಷನ್ ಘಟಕ ಮುಖ್ಯಸ್ಥ ಪಿ. ಎನ್. ಪೆಮ್ಮಯ್ಯ, ಎ.ಎನ್. ಕರುಂಬಯ್ಯ, ಸುಜು ಪೊನ್ನಪ್ಪ, ನಿರ್ದೇಶಕರಾಗಿ ಜೆ.ಎಸ್. ಮಾದಪ್ಪ, ಪಿ. ಟಿ. ಸೋಮಯ್ಯ, ಅಲ್ಲುಮಾಡ ಸುನಿಲ್, ಕೆ.ಪಿ. ಸುಬ್ಬಯ್ಯ, ಕೆ.ಎಸ್. ಚೆಂಗಪ್ಪ, ಸಿ.ಎಂ. ಅಪ್ಪಣ್ಣ, ಸ್ಮರಣ್ ಸುಭಾಷ್, ಕೆ.ಪಿ. ಅಚ್ಚಯ್ಯ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಗರ‍್ನರ್ ಎಂ. ಬಿ. ಸದಾಶಿವ್ ಪ್ರದಗ್ರಹಣ ಬೋಧಿಸಿದರು. ಜಿಲ್ಲೆಯ ವಿವಿಧ ಲಯನ್ಸ್ ಕ್ಲಬ್ ಸದಸ್ಯರುಗಳು, ಜೆಸಿಐ, ಸೀನಿಯರ್ ಜೆಸಿಐ, ರೋಟರಿ ಕ್ಲಬ್ ಪದಾಧಿಕಾರಿಗಳು ಭಾಗವಹಿಸಿದ್ದರು.

ನಿಕಟಪೂರ್ವ ಜಿಲ್ಲಾ ಗರ‍್ನರ್ ಚೆಪ್ಪುಡೀರ ಎ. ಮುತ್ತಣ್ಣ, ಪ್ರಾಂತ ಅಧ್ಯಕ್ಷ ಧನು ಉತ್ತಯ್ಯ, ವಲಯ ಅಧ್ಯಕ್ಷ ಶ್ಯಾಂ ಅಯ್ಯಪ್ಪ, ನಿರ್ಗಮಿತ ಅಧ್ಯಕ್ಷ ಪಿ. ಎಂ. ಜೀವನ್, ಕಾರ್ಯದರ್ಶಿ ಮನ್ನಕಮನೆ ಬಾಲಕೃಷ್ಣ, ಖಜಾಂಚಿ ಸಿ. ಪಿ. ಬೋಪಣ್ಣ ಇದ್ದರು.