ಗುಡ್ಡೆಹೊಸೂರು, ಜೂ. ೨೨: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಲ್ಯಾಂಪ್ಸ್ ಸಹಕಾರ ಸಂಘದ ಪರಿಶಿಷ್ಟ ಜಾತಿಯ ೧೩ ಕುಟುಂಬದವರಿಗೆ ತಲಾ ೪ ಕುರಿಗಳನ್ನು ನೀಡಲಾಯಿತು. ಶಾಸಕ ಅಪ್ಪಚ್ಚು ರಂಜನ್ ಅವರ ಮಾರ್ಗದರ್ಶನದಲ್ಲಿ ಕುರಿಗಳನ್ನು ನೀಡಲಾಯಿತು. ಇದುವರೆಗೂ ಒಟ್ಟು ೩೦೦ ಕುಟುಂಬಕ್ಕೆ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ಮಾಹಿತಿ ನೀಡಿದರು. ಕುರಿಗಳ ವಿತರಣೆ ಸಂದರ್ಭ ವಾಲ್ಮಿಕಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್, ಸಿಬ್ಬಂದಿ ನೀತು ಹಾಗೂ ಸಂಘದ ಉಪಾಧ್ಯಕ್ಷ ಮನು ಮುಂತಾದವರು ಹಾಜರಿದ್ದರು.

ಮುಂದಿನ ದಿನಗಳಲ್ಲಿ ವಿವಿಧ ಫಲಾನುಭವಿಗಳಿಗೆ ಸಂಘದ ವತಿಯಿಂದ ಹಸುಗಳನ್ನು ವಾಲ್ಮಿಕಿ ನಿಗಮದ ಸಹಯೋಗದೊಂದಿಗೆ ಸಂಘದ ಸದಸ್ಯರಿಗೆ ನೀಡಲಾಗುವುದೆಂದು ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ತಿಳಿಸಿದರು.