ಶನಿವಾರಸಂತೆ, ಜೂ. ೨೨: ಅಪ್ಪನ ಕೈಗಳು ಶ್ರಮಪಟ್ಟು ದುಡಿದಾಗಲೇ ಮಕ್ಕಳ ಭವಿಷ್ಯ ಸುಂದರವಾಗಿ ರೂಪುಗೊಳ್ಳುತ್ತದೆ. ಮಕ್ಕಳ ಸಾಧನೆಯಲ್ಲೆ ಅಪ್ಪನ ಖುಷಿ ಅಡಗಿದೆ ಎಂದು ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಹೇಮಾಪರಮೇಶ್ ಅಭಿಪ್ರಾಯಪಟ್ಟರು.

ವಿದ್ಯಾಸಂಸ್ಥೆಯಲ್ಲಿ ನಡೆದ ವಿಶ್ವ ಅಪ್ಪಂದಿರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲೇಖಕಿ ನಯನತಾರಾ ಪ್ರಕಾಶ್ಚಂದ್ರ ಮಾತನಾಡಿ, ಅಮ್ಮ ಮಮತೆ - ವಾತ್ಸಲ್ಯದ ಪ್ರತಿರೂಪವಾದರೇ, ಅಪ್ಪ ಆತ್ಮವಿಶ್ವಾಸ, ಮನೋಸ್ಥೆöÊರ್ಯದ ಸಂಕೇತ. ಮಕ್ಕಳು ಬುದ್ಧಿಮಾತು ಕೇಳುವುದಕ್ಕಿಂತಲೂ ಅನುಕರಣೆ ಮಾಡುತ್ತಾರೆ. ಅಪ್ಪ-ಅಮ್ಮನ ಸಂಸ್ಕಾರ ಮಕ್ಕಳಲ್ಲಿ ಪ್ರತಿಬಿಂಬಿಸುತ್ತದೆ ಎಂದರು.

ಶಿಕ್ಷಕಿ ಯೋಗೇಶ್ವರಿ ಹೇಮಂತ್ ಮಾತನಾಡಿ, ಅಪ್ಪನ ವ್ಯಕ್ತಿತ್ವ, ಉತ್ತಮ ಗುಣಗಳು ಹಾಗೂ ಸಾಧನೆ ಮಕ್ಕಳಿಗೆ ಆದರ್ಶವಾಗಬೇಕು. ಮಕ್ಕಳ ಕಣ್ಣಲ್ಲಿ ಅಪ್ಪ ಹೀರೋ ಎಂದು ಹೇಳಿ ತಮ್ಮ ಅನುಭವ ಹಂಚಿಕೊAಡರು. ಅಪ್ಪಂದಿರು ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತ ಪೋಷಕರಿಗೆ ಅಪ್ಪ-ಮಗನ ಭಾವಚಿತ್ರವಿರುವ ಶುಭಾಷಯ ಪತ್ರ ಹಾಗೂ ಬ್ಯಾಡ್ಜ್ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಮುಖ್ಯ ಶಿಕ್ಷಕಿ ಚೈತ್ರಾ, ಶಿಕ್ಷಕಿಯರಾದ ಪವಿತ್ರ, ಕವನಾ, ಸೌಮ್ಯ, ಮನಸ್ವಿ, ರೂಪಾವತಿ, ಸಾಹಿರಾ, ಶಿಲ್ಪಾ, ತೇಜಾ, ಸಿಬ್ಬಂದಿ ರುಕ್ಮಿಣಿ, ಭರತ್, ಸಚಿನ್ ಉಪಸ್ಥಿತರಿದ್ದರು. ಗಾನಶ್ರೀ ಪ್ರಾರ್ಥಿಸಿ, ಶಿಕ್ಷಕಿ ಕವನಾ ಸ್ವಾಗತಿಸಿ, ವಂದಿಸಿದರು.