ಸೋಮವಾರಪೇಟೆ, ಜೂ. ೨೧: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೊಸ ಬಡಾವಣೆ ಯಲ್ಲಿ ವಿದ್ಯುತ್ ಕಂಬವೊAದು ಬೀಳುವ ಹಂತಕ್ಕೆ ತಲುಪಿದ್ದು, ಈ ಬಗ್ಗೆ ಸೆಸ್ಕ್ಗೆ ಮಾಹಿತಿ ನೀಡಿದ್ದರೂ ಯಾವುದೇ ಸ್ಪಂದನ ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೊಸ ಬಡಾವಣೆಯ ಕೊನೆಯ ಭಾಗದಲ್ಲಿ ಅಳವಡಿಸಿ ರುವ ವಿದ್ಯುತ್ ಕಂಬವೊAದು ಈಗಾಗಲೇ ಬಾಗಿದ್ದು, ಗಾಳಿ-ಮಳೆಗೆ ಧರಾಶಾಹಿಯಾಗುವ ಅಪಾಯದಲ್ಲಿದೆ. ರಸ್ತೆ ಬದಿಯಲ್ಲಿಯೇ ಈ ಅಪಾಯಕಾರಿ ಕಂಬವಿದ್ದು, ಶಾಲಾ ಕಾಲೇಜಿಗೆ ತೆರಳುವ ಮಕ್ಕಳು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಒಂದು ವೇಳೆ ಕಂಬ ಬಿದ್ದರೆ ಅಪಾಯ ಖಚಿತ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವಿದ್ಯುತ್ ಕಂಬಕ್ಕೆ ಯಾವುದೇ ಆಧಾರ ಇಲ್ಲದಿರುವುದರಿಂದ ಯಾವುದೇ ಕ್ಷಣದಲ್ಲಾದರೂ ಬೀಳಬಹುದು. ಕನಿಷ್ಟ ಆಧಾರ ತಂತಿಯನ್ನು ಕಟ್ಟುವಲ್ಲೂ ಸಹ ಸೆಸ್ಕ್ ಇಲಾಖೆ ನಿರ್ಲಕ್ಷö್ಯ ವಹಿಸಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದುರಂತ ಸಂಭವಿಸುವ ಮುನ್ನ ಸೆಸ್ಕ್ ಸಿಬ್ಬಂದಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳಿಯರಾದ ಗಣೇಶ್ ಒತ್ತಾಯಿಸಿದ್ದಾರೆ.