*ಗೋಣಿಕೊಪ್ಪ, ಜೂ. ೨೧: ಬದುಕಿನ ಒತ್ತಡಗಳನ್ನು ಸಂಪೂರ್ಣ ವಾಗಿ ತಗ್ಗಿಸುವ ಶಕ್ತಿ ಯೋಗದಿಂದ ಸಿದ್ಧಿಸುತ್ತದೆ. ಯುವಕರು ಯೋಗಾಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವಾಣಿಜ್ಯ ಕಟ್ಟಡದಲ್ಲಿ ಸಂಪೂರ್ಣ ಸ್ವಾಸ್ಥ÷್ಯಯೋಗ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಮನಸ್ಸನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದಿಂದ ಸಾಧ್ಯ. ಪ್ರಧಾನಮಂತ್ರಿ ಮೋದಿ ಅವರ ಪ್ರೇರಣೆಯಿಂದ ಯುವಸಮುದಾಯ