ಮೈಸೂರು, ಜೂ. ೨೧: ಕೊರೊನಾ ಸಾಂಕ್ರಾಮಿಕ ರೋಗ ಸಮಯದಲ್ಲೂ ಕೂಡ ಯೋಗ ದಿನದ ಉತ್ಸಾಹ ಕಡಿಮೆ ಆಗಿರಲಿಲ್ಲ. ಯೋಗ ದಿನಾಚರಣೆ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ನಮ್ಮೆಲ್ಲರ ಜೀವನಕ್ಕೆ ಯೋಗ ವಿಶ್ವಾಸವನ್ನು ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು. ೮ನೇ ಅಂರ್ರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಾಂಸ್ಕೃತಿಕ ರಾಜಧಾನಿ ಮೈಸೂರು, ಯೋಗ ಭೂಮಿ.. ಇಲ್ಲಿ ಕಂಡ ಯೋಗದ ಬೆಳಕು ಇವತ್ತು ವಿಶ್ವದ ಎಲ್ಲೆಡೆ ಪಸರಿಸಿದೆ. ಇಂದು ಯೋಗ ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. ಮೈಸೂರು ಭಾರತದ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಮೊದಲು ಯೋಗವನ್ನು ಕೇವಲ ಮನೆಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಯೋಗ ವ್ಯಕ್ತಿಗೆ ಮಾತ್ರವಲ್ಲ, ವಿಶ್ವಕ್ಕೆ ಬೇಕಿದೆ. ಎಂದು ಹೇಳಿದರು. ಮೈಸೂರಿನಂತಹ ಭಾರತದ ಆಧ್ಯಾತ್ಮಿಕ ಕೇಂದ್ರಗಳಿAದ ಶತಮಾನಗಳಿಂದ ಪೋಷಿಸಿಕೊಂಡು ಬಂದಿರುವ ಯೋಗ ಶಕ್ತಿ ಇಂದು ವಿಶ್ವ ಆರೋಗ್ಯಕ್ಕೆ ದಿಕ್ಸೂಚಿಯಾಗಿದೆ. ಇಂದು ಯೋಗವು ಜಾಗತಿಕ ಸಹಕಾರಕ್ಕೆ ಪರಸ್ಪರ ಆಧಾರವಾಗುತ್ತಿದೆ. ಇಂದು ಜೀವನ ಶೈಲಿ ಬದಲಾವಣೆ ಆಗಿದೆ. ಯೋಗ ನಮ್ಮ ಬದುಕಿಗೂ ಪ್ರೇರಣೆಯಾಗಿದೆ. ಇಂದು ಯೋಗ ಜೀವನ ಶೈಲಿಯೇ ಆಗಿದೆ. ವಿಶ್ವದಲ್ಲಿ ರೋಗ ಮುಕ್ತಿಗೆ ಯೋಗಾಸನವೇ ಆಧಾರವಾಗಿದೆ. ಪ್ರತಿನಿತ್ಯ ಪ್ರಾಣಾಯಾಮ, ಯೋಗ ಮಾಡೋದನ್ನು ರೂಢಿಸಿಕೊಳ್ಳಿ ಎಂದರು.
ದ್ರೌಪದಿ ಎನ್.ಡಿ.ಎ. ಅಭ್ಯರ್ಥಿ
ನವದೆಹಲಿ, ಜೂ. ೨೧: ಎನ್.ಡಿ.ಎ. ನೇತೃತ್ವದ ಅಚ್ಚರಿ ಅಭ್ಯರ್ಥಿಯಾಗಿ ಜಾರ್ಖಂಡ್ ರಾಜ್ಯಪಾಲರಾಗಿದ್ದ ದ್ರೌಪದಿ ಮುರ್ಮ ಹೊರಹೊಮ್ಮಿದ್ದಾರೆ. ಮೊದಲ ಆದಿವಾಸಿ ಮಹಿಳೆ ರಾಷ್ಟçಪತಿ ಚುನಾವಣಾ ಕಣದಲ್ಲಿದ್ದು, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಂದ ಯಶ್ವಂತ್ ಸಿನ್ಹಾ ಕಣದಲ್ಲಿದ್ದಾರೆ.
ಶಿವಸೇನೆ ಸಚಿವ ಏಕನಾಥ್ ಶಿಂಧೆ ವಜಾ
ಮುಂಬೈ, ಜೂ. ೨೧: ಮಹಾರಾಷ್ಟç ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುರ್ಚಿ ಅಲುಗಾಡುತ್ತಿದ್ದು, ಪಕ್ಷದ ಕೆಲ ಶಾಸಕರೊಂದಿಗೆ ನಾಪತ್ತೆಯಾಗಿರೊ ಶಿವಸೇನೆ ಸಚಿವ ಏಕನಾಥ್ ಶಿಂಧೆ ಅವರನ್ನು ಪಕ್ಷ ವಜಾ ಮಾಡಿದೆ. ಏಕನಾಥ್ ಶಿಂಧೆ ಅವರು ಇತರ ೨೧ ಶಾಸಕರೊಂದಿಗೆ ಗುಜರಾತ್ನ ಸೂರತ್ ಹೋಟೆಲ್ಗೆ ತೆರಳಿದ್ದಾರೆ ಎಂದು ವರದಿಯಾದ ನಂತರ ಶಿವಸೇನೆ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಮತ್ತು ಮುಖ್ಯ ಸಚೇತಕ ಸ್ಥಾನದಿಂದ ಶಿಂಧೆ ಅವರನ್ನು ವಜಾಗೊಳಿಸಿದೆ. ಅದೇ ಸಮಯದಲ್ಲಿ ಏಕನಾಥ್ ಶಿಂಧೆ ಅವರು ತಾವು ಅಧಿಕಾರಕ್ಕಾಗಿ ಎಂದಿಗೂ ಮೋಸ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಬಾಳಾಸಾಹೇಬರು ನಮಗೆ ಹಿಂದುತ್ವವನ್ನು ಕಲಿಸಿದ್ದಾರೆ. ಬಾಳಾಸಾಹೇಬರ ಚಿಂತನೆಗಳು ಮತ್ತು ಧರ್ಮವೀರ್ ಆನಂದ್ ದಿಘೆ ಸಾಹೇಬ್ ಅವರ ಬೋಧನೆಗಳಿಗೆ ಸಂಬAಧಿಸಿದAತೆ ನಾವು ಎಂದಿಗೂ ಅಧಿಕಾರಕ್ಕಾಗಿ ಮೋಸ ಮಾಡಿಲ್ಲ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮಾಲ್ಡೀವ್ಸ್ನಲ್ಲಿ ಯೋಗ ದಿನಕ್ಕೆ ಅಡ್ಡಿ
ಮಾಲೆ, ಜೂ. ೨೧: ಮಾಲ್ಡೀವ್ಸ್ನ ಮಾಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಯೋಗ ಕಾರ್ಯಕ್ರಮಕ್ಕೆ ಪ್ರತಿಭಟನಾಕಾರರ ಗುಂಪೊAದು ಅಡ್ಡಿಪಡಿಸಿರುವ ಘಟನೆ ವರದಿಯಾಗಿದೆ. ರಾಜಧಾನಿ ಮಾಲೆಯಲ್ಲಿ ಭಾರತೀಯ ಹೈಕಮಿಷನ್ನಲ್ಲಿ ಯೋಗ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಜನರ ಗುಂಪನ್ನು ನಿಯಂತ್ರಿಸಲು ಮಾಲ್ಡೀವ್ಸ್ ಪೊಲೀಸರು ಅಶ್ರುವಾಯು ಮತ್ತು ಪೆಪ್ಪರ್ ಸ್ಪೆçà ಬಳಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಅಂರ್ರಾಷ್ಟಿçÃಯ ಯೋಗ ದಿನವನ್ನು ಆಚರಿಸುವ ಕಾರ್ಯಕ್ರಮದಲ್ಲಿ ರಾಜತಾಂತ್ರಿಕರು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ ೧೫೦ ಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದ ಕ್ರೀಡಾಂಗಣಕ್ಕೆ ನುಗ್ಗಿದ ಕೆಲವರು ಯೋಗ ಮಾಡಲು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಯೋಗದಲ್ಲಿ ಭಾಗವಹಿಸಿದ್ದವರ ಮೇಲೆ ದಾಳಿ ಮಾಡಿ, ಆಸ್ತಿಯನ್ನು ಧ್ವಂಸಗೊಳಿಸಿದರು. ದಾಳಿಗೂ ಮುನ್ನ ಪ್ರತಿಭಟನಾಕಾರರು ಯೋಗ, ಇಸ್ಲಾಂ ತತ್ವಕ್ಕೆ ವಿರುದ್ಧವಾಗಿದೆ ಎಂಬ ಫಲಕಗಳನ್ನು ಹಿಡಿದು ವಿರೋಧಿಸಿದ್ದರು ಎಂದು ವರದಿಯಾಗಿದೆ.
ಅಗ್ನಿಪಥ ಯೋಜನೆ ಪ್ರಶ್ನಿಸಿ ಅರ್ಜಿ-ಕೇಂದ್ರದಿAದ ಕೇವಿಯೆಟ್
ನವದೆಹಲಿ, ಜೂ. ೨೧: ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ಅಗ್ನಿಪಥ ಯೋಜನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಸಂಬAಧ ಯಾವುದೇ ಆದೇಶವನ್ನು ಹೊರಡಿಸುವ ಮೊದಲು ತನ್ನ ವಾದವನ್ನು ಆಲಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಕೇವಿಯೆಟ್ ಸಲ್ಲಿಸಿದೆ. ವಕೀಲ ಹರ್ಷ್ ಅಜಯ್ ಸಿಂಗ್ ಅವರು ಅಗ್ನಿಪಥ ಯೋಜನೆ ವಿರುದ್ಧ ಪಿಐಎಲ್ ಸಲ್ಲಿಸಿದ್ದು, ಅಗ್ನಿಪಥ ಯೋಜನೆ, ರಾಷ್ಟಿçÃಯ ಭದ್ರತೆ ಮತ್ತು ಸೇನೆಯ ಮೇಲೆ ಅದರಿಂದಾಗುವ ಪರಿಣಾಮದ ಕುರಿತು ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದ್ದಾರೆ. ಮತ್ತೊಂದು ಪಿಐಎಲ್ನಲ್ಲಿ ವಕೀಲ ಎಂ.ಎಲ್.ಶರ್ಮಾ ಅವರು, ‘ಅಗ್ನಿಪಥ’ ಯೋಜನೆಯ ಮೂಲಕ ಶತಮಾನದಷ್ಟು ಹಳೆಯದಾದ ಸೇನಾ ನೇಮಕಾತಿ ಕ್ರಮವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸಂಸತ್ತಿನ ಅನುಮೋದನೆ ಇಲ್ಲದ ಈ ಕ್ರಮ ಸಂವಿಧಾನಬಾಹಿರ ಎಂದಿದ್ದಾರೆ.
ನಟ ದಿಗಂತ್ಗೆ ಪೆಟ್ಟು
ಪಣಜಿ, ಜೂ. ೨೧: ಗೋವಾದ ಸಮುದ್ರ ತಟದಲ್ಲಿ ಸಮ್ಮರ್ ಸಾಲ್ಟ್ ಹೊಡೆಯುವ ವೇಳೆ ನಟ ದಿಗಂತ್ ಬೆನ್ನು ಮೂಳೆಗೆ, ಕುತ್ತಿಗೆಗೆ ತೀವ್ರ ಪೆಟ್ಟು ಬಿದ್ದಿದ್ದು ಅವರನ್ನು ಚಿಕಿತ್ಸೆಗೆಂದು ಬೆಂಗಳೂರಿಗೆ ಏರ್ಲಿಫ್ಟ್ ಮೂಲಕ ಕರೆತರಲಾಯಿತು. ಆಸ್ಪತ್ರೆಯ ಮೂಲಗಳ ಪ್ರಕಾರ, ಅವರು ಪತ್ನಿ ಐಂದ್ರಿತಾ ರೈ ಅವರೊಂದಿಗೆ ರಜೆಗಾಗಿ ಗೋವಾಕ್ಕೆ ಬಂದಿದ್ದರು. ಸಾಹಸ ಕ್ರೀಡೆಗಳನ್ನು ಇಷ್ಟಪಡುವ ದಿಗಂತ್ ಸಮ್ಮರ್ ಸಾಲ್ಟ್ ಮಾಡುವಾಗ ಈ ಘಟನೆ ನಡೆದಿದೆ. ಆರಂಭದಲ್ಲಿ ದಿಗಂತ್ ಅವರನ್ನು ಗೋವಾದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಅವರನ್ನು ವಿಮಾನದ ಮೂಲಕ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಯಿತು.
ಬಿಹಾರ ಶಾಸಕನಿಗೆ ೧೦ ವರ್ಷ ಜೈಲು ಶಿಕ್ಷೆ
ಪಾಟ್ನಾ, ಜೂ. ೨೧: ಎಕೆ-೪೭ ರೈಫಲ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ಬಿಹಾರ ಶಾಸಕ ಅನಂತ್ ಕುಮಾರ್ ಸಿಂಗ್ ಅವರಿಗೆ ವಿಚಾರಣಾ ನ್ಯಾಯಾಲಯ ಶಸ್ತಾçಸ್ತç ಕಾಯ್ದೆ ಅಡಿ ೧೦ ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ, ತಾ. ೧೪ ರಂದು ಆರೋಪಿ ಶಾಸಕ ಅನಂತ್ ಸಿಂಗ್ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. ೨೦೧೯ ರಲ್ಲಿ ಪಾಟ್ನಾ ಜಿಲ್ಲೆಯ ಬಾರ್ಹ್ ಉಪ-ವಿಭಾಗದ ಲಾಡ್ಮಾದಲ್ಲಿ ಸಿಂಗ್ ಅವರ ಪೂರ್ವಜರ ಮನೆಯಿಂದ ಂಏ-೪೭ ಅಸಾಲ್ಟ್ ರೈಫಲ್, ಎರಡು ಹ್ಯಾಂಡ್ ಗ್ರೆನೇಡ್ ಮತ್ತು ೨೬ ಲೈವ್ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಶಾಸಕನಿಗೆ ೧೦ ವರ್ಷ ಜೈಲು ಶಿಕ್ಷೆ ವಿಧಿಸಿದೆ. ತೀರ್ಪಿನ ಪ್ರತಿಯನ್ನು ಪರಿಶೀಲಿಸಿದ ನಂತರ ತಮ್ಮ ಕಕ್ಷಿದಾರರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಸಿಂಗ್ ಅವರ ಕಾನೂನು ಸಲಹೆಗಾರ ಸುನೀಲ್ ಸಿಂಗ್ ಅವರು ಹೇಳಿದ್ದಾರೆ.
ನಕ್ಸಲರ ದಾಳಿಯಲ್ಲಿ ಮೂವರು ಹುತಾತ್ಮ
ನುವಾಪಾಡಾ, ಜೂ. ೨೧: ಒಡಿಶಾದ ನುವಾಪಾಡಾ ಜಿಲ್ಲೆಯಲ್ಲಿ ಮಂಗಳವಾರ ನಕ್ಸಲರು ಅಟ್ಟಹಾಸ ಮೆರೆದಿದ್ದು, ಭದ್ರತಾ ಪೋಸ್ನಲ್ಲಿ ಮಾವೋವಾದಿಗಳು ನಡೆಸಿದ ಹೊಂಚುದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸಿಬ್ಬಂದಿಗಳಲ್ಲಿ ಒಬ್ಬರು ಸೈನಿಕರಾಗಿದ್ದು ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಆರ್ಪಿಎಫ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಶ್ರೇಣಿಯ ಸಿಬ್ಬಂದಿ ಎಂದು ಗುರುತಿಸಲಾಗಿದೆ. ರಸ್ತೆ ತೆರೆಯುವ ಕಾರ್ಯದಲ್ಲಿ ತೊಡಗಿದ್ದ ಪಡೆಗಳ ಮೇಲೆ ಮಾವೋವಾದಿಗಳು ಸುಧಾರಿತ ಮತ್ತು ಕಚ್ಚಾ ಬ್ಯಾರೆಲ್ ಗ್ರೆನೇಡ್ ಲಾಂಚರ್ಗಳನ್ನು ಬಳಸಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದುರದೃಷ್ಟವಶಾತ್, ನುವಾಪಾಡಾದಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಎಂದು ಒಡಿಶಾ ಪೊಲೀಸ್ ಮಹಾನಿರ್ದೇಶಕ ಎಸ್.ಕೆ. ಬನ್ಸಾಲ್ ತಿಳಿಸಿದ್ದಾರೆ.