ಚೆಟ್ಟಳ್ಳಿ, ಜೂ. ೨೧: ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ಯೋಜನಾ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ, ತಾಲೂಕು ಯುವ ಒಕ್ಕೂಟ, ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪ ಇವರ ಸಂಯುಕ್ತಾ ಶ್ರಯದಲ್ಲಿ ಗೋಣಿಕೊಪ್ಪಲಿನ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆದ ರಾಷ್ಟçಮಟ್ಟದ ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ನೆಹರು ಭಗತ್ ಸಿಂಗ್ ಎಫ್.ಸಿ. ಗೋಣಿಕೊಪ್ಪ ತಂಡವು ಚಾಂಪಿಯನ್ ಪ್ರಶಸ್ತಿ ಪಡೆದಿದ್ದು, ಆತಿಥೇಯ ತಂಡ ಆಲ್ ಸ್ಟಾರ್ ಯೂತ್ ಕ್ಲಬ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಜಿದ್ದಾಜಿದ್ದಿನಿAದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಆಲ್ ಸ್ಟಾರ್ ಯೂತ್ ಕ್ಲಬ್ ಮೊದಲಾರ್ಧದಲ್ಲಿ ಗೋಲು ಬಾರಿಸಿ ಮುನ್ನಡೆ ಕಾಯ್ದುಕೊಂಡಿತು.
ದ್ವಿತೀಯಾರ್ಧದಲ್ಲಿ ನೆಹರು ಭಗತ್ ಸಿಂಗ್ ಎಫ್.ಸಿ. ತಂಡವು ಆಕ್ರಮಣಕಾರಿ ಆಟಕ್ಕೆ ಮುಂದಾಗಿ, ೨ ಗೋಲುಗಳನ್ನು ಬಾರಿಸುವುದರ ಮೂಲಕ ೨-೧ ಗೋಲುಗಳ ಅಂತರದಿAದ ಗೆದ್ದು ಆಲ್ ಇಂಡಿಯಾ ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯ ಒಂದು ಲಕ್ಷ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಅತಿಥಿ ಆಟಗಾರರನ್ನೊಳಗೊಂಡ ಕಲ್ಲು ಬಾಯ್ಸ್ ಕಲ್ಲುಬಾಣೆ ಹಾಗೂ ನೆಹರು ಭಗತ್ ಸಿಂಗ್ ಎಫ್.ಸಿ. ಗೋಣಿಕೊಪ್ಪ ತಂಡಗಳ ನಡುವೆ ನಡೆಯಿತು.
ನೆಹರು ಭಗತ್ ಸಿಂಗ್ ಎಫ್.ಸಿ. ತಂಡವು ೩-೦ ಗೋಲುಗಳಿಂದ ಕಲ್ಲುಬಾಣೆ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ದ್ವಿತೀಯ ಸೆಮಿಫೈನಲ್ ಪಂದ್ಯವು ಕೆ.ಎಫ್.ಸಿ. ಕಾರಡ್ಕ ಕಾಸರಗೋಡು ಹಾಗೂ ಆತಿಥೇಯ ತಂಡ ಆಲ್ ಸ್ಟಾರ್ ಯೂತ್ ಕ್ಲಬ್ ತಂಡಗಳ ನಡುವೆ ನಡೆಯಿತು.
ಆಲ್ ಸ್ಟಾರ್ ತಂಡವು ರಕ್ಷಣಾತ್ಮಕವಾದ ಆಟಕ್ಕೆ ಮುಂದಾಗಿ ೧-೦ ಗೋಲುಗಳ ಅಂತರದಿAದ ಗೆದ್ದು ಫೈನಲ್ ಪ್ರವೇಶಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ಪರಾಜಿತ ತಂಡಗಳ ನಡುವೆ ನಡೆದ ತೃತೀಯ ಸ್ಥಾನದ ಪಂದ್ಯದಲ್ಲಿ ಕಲ್ಲು ಬಾಯ್ಸ್ ಕಲ್ಲುಬಾಣೆ ತಂಡವು ಕೆ.ಎಫ್.ಸಿ. ಕಾರಡ್ಕ ಕಾಸರಗೋಡು ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ೩-೧ ಗೋಲುಗಳ ಅಂತರದಿAದ ಮಣಿಸಿ ತೃತೀಯ ಸ್ಥಾನ ಗಳಿಸಿತು. ಕೆ.ಎಫ್.ಸಿ. ಕಾರಡ್ಕ ತಂಡವು ನಾಲ್ಕನೇ ಸ್ಥಾನ ಗಳಿಸಿತು.
ಪಂದ್ಯಾವಳಿಯ ಅತ್ಯುತ್ತಮ ಆಟಗಾರ ನೆಹರು ಭಗತ್ ಸಿಂಗ್ ಎಫ್.ಸಿ. ತಂಡದ ಸಂತೋಷ್, ಅತ್ಯುತ್ತಮ ಡಿಫೆಂಡರ್ ಆಲ್ ಸ್ಟಾರ್ ತಂಡದ ತನ್ವೀರ್, ಅತ್ಯುತ್ತಮ ತಂಡ ಯುವ ಶಕ್ತಿ ಕಾಸರಗೋಡು, ಅತ್ಯುತ್ತಮ ಗೋಲ್ ಕೀಪರ್ ಆಲ್ ಸ್ಟಾರ್ ತಂಡದ ಪ್ರೇಮ್, ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರ ನೆಹರು ಭಗತ್ ಸಿಂಗ್ ಎಫ್.ಸಿ. ತಂಡದ ಜುನೈದ್, ಉದಯೋನ್ಮುಖ ಆಟಗಾರ ಆಲ್ ಸ್ಟಾರ್ ತಂಡದ ಸೋಲಮನ್ ಜೊಜೋ, ಅತ್ಯುತ್ತಮ ಮಿಡ್ ಫೀಲ್ಡರ್ ಕಲ್ಲು ಬಾಯ್ಸ್ ಕಲ್ಲುಬಾಣೆ ತಂಡದ ಫಹೀಮ್ ಅಲಿ, ಬೆಸ್ಟ್ ಸ್ಟೆçöÊಕರ್ ಆಲ್ ಸ್ಟಾರ್ ತಂಡದ ಸುನಿಲ್, ಫೈನಲ್ ಪಂದ್ಯದ ಹೀರೋ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನೆಹರು ಭಗತ್ ಸಿಂಗ್ ಎಫ್.ಸಿ. ತಂಡದ ನಾಶಿಫ್ ಪಡೆದುಕೊಂಡರು.
ಮೂರು ದಿನಗಳ ಕಾಲ ನಡೆದ ರಾಷ್ಟç ಮಟ್ಟದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಮುಂಬೈ, ಬೆಂಗಳೂರು, ಕಾಸರಗೋಡು, ಮಲಪ್ಪುರಂ, ವಯನಾಡು ತಂಡಗಳು ಭಾಗವಹಿಸಿದ್ದವು.
ಪಂದ್ಯಾವಳಿಯ ತೀರ್ಪು ಗಾರರಾಗಿ ಧೀರಜ್ ರೈ, ದರ್ಶನ್ ಸುಕುಮಾರ್, ಇಸ್ಮಾಯಿಲ್ ಕಂಡಕರೆ ಹಾಗೂ ಶೇಷಪ್ಪ ಕಾರ್ಯ ನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ರಫೀಜ್ ಮೂಡಬಿದಿರೆ ನೆರವೇರಿಸಿದರು.
-ಕೆ.ಎಂ. ಇಸ್ಮಾಯಿಲ್, ಕಂಡಕರೆ