*ಗೋಣಿಕೊಪ್ಪ, ಜೂ. ೧೮: ಪೊನ್ನಂಪೇಟೆ ರಾಮಕೃಷ್ಣ ಆಶ್ರಮದಿಂದ ಗೋಣಿಕೊಪ್ಪ ಬೈಪಾಸ್ ರಸ್ತೆಯ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದವರೆಗೆ ತಾಲೂಕು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ವಿಕಾಸ ತೀರ್ಥ ಬೈಕ್ ಜಾಥಾ ನಡೆಯಿತು.
ಬಿಜೆಪಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ನೇತೃತ್ವದಲ್ಲಿ ಬೈಕ್ ಜಾಥಾಕ್ಕೆ ಪೊನ್ನಂಪೇಟೆ ಕುಶಲಪುರ ಸರ್ಕಾರಿ ಶಾಲಾ ಮೈದಾನದಲ್ಲಿ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮೋದಿ ಸರ್ಕಾರದ ಎಂಟು ವರ್ಷದ ಸಾಧನೆಯನ್ನು ಪ್ರತಿ ಮನೆಗಳಿಗೆ ಮತ್ತು ಮನಗಳಿಗೆ ತಲುಪಿಸುವ ವ್ಯವಸ್ಥೆಗೆ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ವರ್ಗದವರಿಗೂ ಸರ್ಕಾರದ ಯೋಜನೆಗಳನ್ನು ನೇರವಾಗಿ ತಲುಪಿಸುವಲ್ಲಿ ಸರ್ಕಾರ ಸಫಲತೆಯನ್ನು ಕಂಡುಕೊAಡಿದೆ. ಕಟ್ಟಕಡೆಯ ವ್ಯಕ್ತಿಯು ಸೌಲಭ್ಯಗಳಿಂದ ವಂಚಿತರಾಗದೇ ಸದುಪಯೋಗದಿಂದ ಚೇತರಿಸಿಕೊಳ್ಳುವ ಕಾರ್ಯವನ್ನು ಸರ್ಕಾರ ಪ್ರತಿಯೊಬ್ಬರಿಗೂ ತಲುಪಿಸಿದೆ ಎಂದು ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ಲಾಘಿಸಿದರು.
ಕಾರ್ಯಕರ್ತರು ಮೋದಿ ಸರ್ಕಾರದ ಎಂಟು ವರ್ಷದ ಸಮರ್ಥ ಆಡಳಿತವನ್ನು ಜನತೆಯ ಮುಂದೆ ಹೇಳಬೇಕಾಗಿದೆ ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ೭೦ ವರ್ಷದ ಭ್ರಷ್ಟಾಚಾರದ ಆಡಳಿತವನ್ನು ಕೊನೆಗಾಣಿಸಿ ಬಿಜೆಪಿ ಸರ್ಕಾರ ಜನಪರ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಂದು ಜಾತಿ, ಜನಾಂಗ, ಧರ್ಮದವರಿಗೂ ಸರ್ಕಾರ ಹಲವಾರು ಯೋಜನೆಗಳನ್ನು ಸೃಷ್ಠಿಸಿ ನೇರವಾಗಿ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದೆ. ಇಂತಹ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಲುಪಿಸದೆ ಇದ್ದರೆ ಸರ್ಕಾರದ ಆಡಳಿತಾತ್ಮಕ ವ್ಯವಸ್ಥೆ ಮನವರಿಕೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೇನೆಗೆ ಯುವಕರನ್ನು ಕರೆತರುವ ‘ಅಗ್ನಿಪಥ್’ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ. ಸರ್ಕಾರದ ಯಾವುದೇ ಅಭಿವೃದ್ದಿ ಯೋಜನೆಗಳನ್ನು ವಿರೋಧಿಸುವುದು ವಿರೋಧಪಕ್ಷಗಳ ಕಾಯಕವಾಗಿದೆ. ಮೋದಿ ಕಾರ್ಯಗಳನ್ನು ಜೀರ್ಣಿಸಿ ಕೊಳ್ಳಲಾಗದವರು ಅಪಪ್ರಚಾರದ ಮೂಲಕ ಸಮಾಜದ ಶಾಂತಿಕದಡುವ ಪ್ರಯತ್ನ ನಡೆಸುತ್ತಿರುವುದು ವಿಷಾಧನೀಯ ಬೆಳವಣಿಗೆ ಎಂದು ಹೇಳಿದರು.
ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಮಾತನಾಡಿದರು.
ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ದರ್ಶನ ಜೋಯಪ್ಪ, ಪ್ರಧಾನ ಕಾರ್ಯದರ್ಶಿ ಪ್ರಸಾದ್ಚಂಗಪ್ಪ, ಗುಮ್ಮಟೀರ ಚಂಗಪ್ಪ, ನವನೀತ್, ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್, ಕಾರ್ಯದರ್ಶಿ ಚೆರಿಯಪಂಡ ಸುಬ್ಬಯ್ಯ, ನಾಚಪ್ಪ, ಉಪಾಧ್ಯಕ್ಷ ಪೊನ್ನಣ್ಣ, ಗಗನ್ ಗಣಪತಿ, ಸದಸ್ಯರಾದ ವಿವೇಕ್ರಾಯ್ಕರ್, ಕೌಶಿಕ್ ಕಾರ್ಯಪ್ಪ, ಕುಶಾಲಪ್ಪ, ಕಿಶಾನ್, ನಿತಿನ್ ಮೊಣ್ಣಪ್ಪ, ಸುಬ್ಬಯ್ಯ ಹಾಗೂ ತಾಲೂಕು ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಮಾಜಿ ಜಿ.ಪಂ ಸದಸ್ಯ ಸಿ.ಕೆ. ಬೋಪಣ್ಣ, ಜಿಲ್ಲಾ ಬಿಜೆಪಿ ಖಜಾಂಜಿ ಗುಮ್ಮಟಿರ ಕಿಲನ್ಗಣಪತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಬೋಜಪ್ಪ, ಪಕ್ಷದ ವಿವಿಧ ಮೋರ್ಚಾದ ಮತ್ತು ಸಮಿತಿಗಳ ಪ್ರಮುಖರಾದ ತೋರಿರ ವಿನು, ಕುಪ್ಪಂಡ ಗಿರಿಪೂವಣ್ಣ, ಮೂಕಳೇರ ಮಧು, ಕಾವ್ಯ, ಚೆಪುö್ಪಡೀರ ಮಾಚು, ದಶಮಿ ದೇಚಮ್ಮ, ಅಜ್ಜಿಕುಟ್ಟೀರ ಪ್ರವೀಣ್ ಚಂಗಪ್ಪ, ಕಬೀರ್ದಾಸ್, ಹಕೀಮ್, ಜ್ಯೋತಿ, ಶಶಿ, ಶಿಲ್ಪ, ವಿಮಲ ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧುದೇವಯ್ಯ ಹಾಜರಿದ್ದರು. -ಎನ್.ಎನ್.ದಿನೇಶ್