ಚೆಯ್ಯಂಡಾಣೆ, ಜೂ. ೧೯: ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಬಾವಲಿ, ಮೂಕಂಡ ಬಾಣೆ ಪೈಸಾರಿ ಹಾಗೂ ಕೆರೆಮಿಲ್ಲುಗಳಲ್ಲಿ ಕಾರ್ಯಾಚರಿಸಲು ನೂತನ ಸಂಗಮ ಹಾಗೂ ಶ್ರೀನಿಧಿ ಸ್ವಸಹಾಯ ಸಂಘ ಎಂಬ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಸ್ತುವಾರಿಯಲ್ಲಿ ಸ್ವಸಹಾಯ ಸಂಘಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾಂಧಿ ಬೆಳ್ಳಿಮಯ್ಯ ಹಾಗೂ ಅಂಗನವಾಡಿ ನಿವೃತ್ತ ಶಿಕ್ಷಕಿ ಮಾಚಮ್ಮ ಉದ್ಘಾಟಿಸಿದರು.
ಈ ಸಂದರ್ಭ ಮೇಲ್ವಿಚಾರಕರಾದ ಅನುಷಾ ಹಾಗೂ ಸೇವಾ ಪ್ರತಿನಿಧಿ ಬಿ.ಎಸ್. ಮಂಜುಳಾ ಉಪಸ್ಥಿತರಿದ್ದರು.