ಕೂಡಿಗೆ, ಜೂ. ೧೯: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೈನಿಕ ಶಾಲಾ ಸೊಸೈಟಿಯ ನಿರೀಕ್ಷಣಾಧಿಕಾರಿ ಬ್ರಿಗೇಡಿಯರ್ ಡಾ. ರ‍್ವೀನ್ ಕುಮಾರ್ ಶರ್ಮಾ ಆಗಮಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ಶಾಲೆಯ ಆವರಣದಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸುವುದರ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. ನಂತರ ಜ್ಯೋತಿ ಬೆಳಗುವುದರ ಮೂಲಕ ವಿದ್ಯಾರ್ಥಿಗಳ ಪದಗ್ರಹಣ ಸಮಾ ರಂಭಕ್ಕೆ ಚಾಲನೆ ನೀಡಿದ ಶರ್ಮಾ ಅವರು, ಶಾಲೆಯ ವಿವಿಧ ವಿಭಾಗಗಳ ನಾಯಕರಾಗಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳಿಗೆ ಜವಾಬ್ದಾರಿಗಳನ್ನು ವಹಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭ ೨೦೨೧-೨೨ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ ಕೂಡಿಗೆ, ಜೂ. ೧೯: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೈನಿಕ ಶಾಲಾ ಸೊಸೈಟಿಯ ನಿರೀಕ್ಷಣಾಧಿಕಾರಿ ಬ್ರಿಗೇಡಿಯರ್ ಡಾ. ರ‍್ವೀನ್ ಕುಮಾರ್ ಶರ್ಮಾ ಆಗಮಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ಶಾಲೆಯ ಆವರಣದಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸುವುದರ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. ನಂತರ ಜ್ಯೋತಿ ಬೆಳಗುವುದರ ಮೂಲಕ ವಿದ್ಯಾರ್ಥಿಗಳ ಪದಗ್ರಹಣ ಸಮಾ ರಂಭಕ್ಕೆ ಚಾಲನೆ ನೀಡಿದ ಶರ್ಮಾ ಅವರು, ಶಾಲೆಯ ವಿವಿಧ ವಿಭಾಗಗಳ ನಾಯಕರಾಗಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳಿಗೆ ಜವಾಬ್ದಾರಿಗಳನ್ನು ವಹಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭ ೨೦೨೧-೨೨ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ ಕಾರ್ಯಕ್ರಮದಲ್ಲಿ ರಿತು ಶರ್ಮ, ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್, ಪ್ರಿಯಾಂಕ ಕಣ್ಣನ್, ಹಿರಿಯ ಶಿಕ್ಷಕರಾದ ವಿಬಿನ್ ಕುಮಾರ್, ಬೋಧಕ, ಬೋಧಕೇತರ ವರ್ಗ, ಎನ್‌ಸಿಸಿ ಮತ್ತು ದೈಹಿಕ ಶಿಕ್ಷಕರು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕೆಡೆಟ್ ವಿಷ್ಣು ಸ್ವಾಗತಿಸಿ, ಕೆಡೆಟ್ ಸರ್ವೇಶ್ ನಿರೂಪಿಸಿ, ಕೆಡೆಟ್ ಸುಹಾನ್ ವಂದಿಸಿದರು.