ಸಿದ್ದಾಪುರ, ಜೂ. ೧೯: ನೆಲ್ಲಿಹುದಿಕೇರಿ ಗ್ರಾ.ಪಂ.ಗೆ ಸಾರ್ವಜನಿಕ ಸ್ನೇಹಿ ಸಂಬAಧ ಮೂರು ಪ್ರಶಸ್ತಿಗಳು ದೊರೆತಿದೆ. ನೆಲ್ಲಿಹುದಿಕೇರಿ ಗ್ರಾ.ಪಂ. ೨೦೨೧-೨೨ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಜನರಿಗೆ ಕೂಲಿ ಕೆಲಸವನ್ನು ನೀಡಿದೆ. ಸುಮಾರು ರೂ. ೧.೪೬ ಕೋಟಿ ಅನುದಾನದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಮಾಡಿಸಿದೆ. ಇದನ್ನು ಪರಿಗಣಿಸಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ನೆಲ್ಲಿಹುದಿಕೇರಿ ಪಂಚಾಯಿತಿ ಪ್ರಶಸ್ತಿ ಪಡೆದುಕೊಂಡಿದೆ. ಇದಲ್ಲದೇ ಸಾರ್ವಜನಿಕ ಸ್ನೇಹಿ ಎಂಬ ಹಿನ್ನೆಲೆಯಲ್ಲಿ ಮತ್ತೊಂದು ಪ್ರಶಸ್ತಿ ಕೂಡ ಗ್ರಾ.ಪಂ.ಗೆ ಲಭಿಸಿದೆ. ಕುಶಾಲನಗರ ತಾಲೂಕಿನಲ್ಲಿ ಅತ್ಯುತ್ತಮ ನೀರುಗಂಟಿಯಾಗಿ ಸೇವೆ ನಿರ್ವಹಿಸಿದ ನೆಲ್ಲಿಹುದಿಕೇರಿ ಗ್ರಾ.ಪಂ. ಆಸಿಫ್ ಅವರಿಗೂ ಕೂಡ ಪ್ರಶಸ್ತಿ ಲಭಿಸಿದೆ. ನೆಲ್ಲಿಹುದಿಕೇರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಎಸ್. ಅನಿಲ್ ಕುಮಾರ್ ಅವರು ೨೦೧೮-೧೯ನೇ ಸಾಲಿನಲ್ಲಿ ಪ್ರವಾಹ ಬಂದಾಗ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಪರಿಗಣಿಸಿ ರಾಷ್ಟಿçÃಯ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾ ಪ್ರಶಸ್ತಿ ಪಂಚಾಯಿತಿಗೆ ಲಭಿಸಿದೆ. ಇದೀಗ ಮತ್ತೆ ಗ್ರಾ.ಪಂ.ಯ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮೂರು ಪ್ರಶಸ್ತಿಗಳು ಲಭಿಸಿರುವುದು ಸಂತಸ ತಂದಿದೆ ಎಂದು ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಅಭಿಪ್ರಾಯಿಸಿದ್ದಾರೆ.