ಕುಶಾಲನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಮುಳ್ಳುಸೋಗೆ ಸರ್ಕಾರಿ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭ ಗ್ರಾಮೀಣಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಪೂರ್ಣಿಮಾ, ಸೇವಾ ಪ್ರತಿನಿಧಿ ಸಂಗೀತ, ದಾಟಿ, ಯಶೋಧ, ಜಯಲಕ್ಷಿö್ಮ, ಭಾಗ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಲುವರಾಜು, ಉಪಾಧ್ಯಕ್ಷೆ ಜಯಮ್ಮ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯ, ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ ಮತ್ತಿತರರಿದ್ದರು.

ಗೋಣಿಕೊಪ್ಪ ಪ್ರೌಢಶಾಲೆ *ಗೋಣಿಕೊಪ್ಪಲು: ೨೦ ವರ್ಷಗಳಿಂದ ನಿರಂತರವಾಗಿ ಪರಿಸರ ದಿನಾಚರಣೆಯನ್ನು ನಡೆಸಿಕೊಂಡು ಬರುತ್ತಿರುವ, ಗೋಣಿಕೊಪ್ಪ ಪ್ರೌಢಶಾಲೆಯಲ್ಲಿ ೪೦ ವಿವಿಧ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ರಾಷ್ಟಿçÃಯ ಹಸಿರು ಪಡೆ), ಅರಣ್ಯ ಇಲಾಖೆ ಮತ್ತು ಟೈಗರ್ ಪಗ್ ಪರಿಸರ ಸಂಘದ ಸಂಯುಕ್ತ ಆಶ್ರಯದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ತಿತಿಮತಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉತ್ತಪ್ಪ ಸಮ್ಮುಖದಲ್ಲಿ ಚಾಲನೆ ನೀಡಿದರು.

ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಜಲಮೂಲ ವೃದ್ಧಿಸುತ್ತದೆ. ಮಾನವನಿಗೆ ಉತ್ತಮ ಗಾಳಿ ದೊರೆತು ಆರೋಗ್ಯ ಕಾಪಾಡುತ್ತದೆ ಎಂದು ಅತಿಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಪರಿಸರ ಸಂಘದ ಸಂಚಾಲಕ ಡಿ. ಕೃಷ್ಣ ಚೈತನ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಅರಣ್ಯಗಳು ಮಾನವನಿಗೆ ಬೇಕಾದ ನೀರು, ಆಹಾರ, ಔಷಧ, ಮರ-ಮುಟ್ಟು, ಕೈಗಾರಿಕೆಗೆ ಬೇಕಾದ ಕಚ್ಛಾ ಪದಾರ್ಥಗಳನ್ನು ಒದಗಿಸುತ್ತಿದೆ. ವಾತಾವರಣದ ಉಷ್ಣತೆಯನ್ನು ಕಡಿಮೆ ಮಾಡಿ ಮಳೆಯನ್ನು ತರಿಸುತ್ತದೆ. ಗಾಳಿಯನ್ನು ಶುದ್ಧೀಕರಿಸುತ್ತದೆ. ಮಣ್ಣಿನ ಸವಕಳಿಯನ್ನು ತಪ್ಪಿಸುತ್ತದೆ ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕ ರತೀಶ್ ರೈ ಅಧ್ಯಕ್ಷತೆಯಲ್ಲಿ ತಿತಿಮತಿ ವಲಯದ ಉಪ ವಲಯ ಅರಣ್ಯಾಧಿಕಾರಿ ರವಿಕರಣ್, ಸಿಬ್ಬಂದಿ ವರ್ಗ, ಶಿಕ್ಷಕ ವೃಂದ ಉಪಸ್ಥಿತರಿದ್ದರು. ಜನನಿ ಮತ್ತು ತಂಡದವರು ಪರಿಸರ ಗೀತೆಯನ್ನು ಹಾಡಿ ಪ್ರಾರ್ಥಿಸಿದರು. ಸಿಂಚನ ಕಾರ್ಯಕ್ರಮ ನಿರೂಪಿಸಿ, ಆರ್ಯ ನಂದ ವಂದಿಸಿದರು.ತಾ. ೨೮ ರಂದು “ನಾಡ್‌ಮದ್ದ್ಕಾರಡ ಸಮಾವೇಶ”

ಮಡಿಕೇರಿ, ಜೂ. ೧೯: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ತಾ. ೨೮ ರಂದು ಸೋಮವಾರಪೇಟೆ ಕೊಡವ ಸಮಾಜದಲ್ಲಿ “ನಾಡ್‌ಮದ್ದ್ಕಾರಡ ಸಮಾವೇಶ” ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ “ನಾಟಿವೈದ್ಯ”ದಲ್ಲಿ ಪರಿಣಿತಿ ಹೊಂದಿರುವವರು ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಬೇಕಾಗಿ ಕೋರಿದೆ. ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ “ನಾಟಿವೈದ್ಯರು” ತಮ್ಮ ಮಾಹಿತಿಯನ್ನು ಅಕಾಡೆಮಿ ಇಮೇಲ್ ಞoಜಚಿvಚಿ.ಚಿಛಿಚಿಜಚಿmಥಿ@gmಚಿiಟ.ಛಿom ಅಥವಾ ಹಾರ್ಡ್ ಕಾಪಿಯನ್ನು ಅಕಾಡೆಮಿ ಕಚೇರಿಗೆ ಜೂನ್, ೨೩ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ-೦೮೨೭೨-೨೨೯೦೭೪, ಕವನ್ ಕಾರ್ಯಪ್ಪ-೯೪೪೮೩೨೫೯೪೫ ನ್ನು ಸಂಪರ್ಕಿಸಬಹುದು ಎಂದು ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.