ಮಡಿಕೇರಿ, ಜೂ. ೧೮: ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಗರದ ಹೊರವಲಯದಲ್ಲಿ ಸ್ವಾಗತ ಫಲಕವನ್ನು ರೋಟರಿ ಜಿಲ್ಲಾ ಗವರ್ನರ್ ಎ.ಆರ್. ರವೀಂದ್ರ ಭಟ್ ಅನಾವರಣಗೊಳಿಸಿದರು.

ನೂತನ ರೋಟರಿ ಸಂಸ್ಥೆಯಾಗಿರುವ ರೋಟರಿ ವುಡ್ಸ್ ವತಿಯಿಂದ ಮಡಿಕೇರಿಗೆ ಸ್ವಾಗತ ಮತ್ತು ಶುಭವಿದಾಯ ಕೋರುವುದರೊಂದಿಗೆ ನಗರವನ್ನು ಶುಚಿಯಾಗಿಸಿಟ್ಟುಕೊಳ್ಳಿ ಎಂಬ ಸಂದೇಶದ ಮಾಹಿತಿ ಫಲಕ ಬಹಳ ಸೂಕ್ತವಾಗಿದೆ ಎಂದು ರವೀಂದ್ರ ಭಟ್ ಶ್ಲಾಘಿಸಿದರು.

ಇದೇ ಸಂದರ್ಭ ರೋಟರಿ ವುಡ್ಸ್ ವತಿಯಿಂದ ಮಡಿಕೇರಿಗೆ ಬರುವ ಪ್ರವಾಸಿಗರಿಗೆ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಸಂದೇಶವನ್ನೂ ಸಾರಲಾಯಿತು, ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ರೋಟರಿ ವುಡ್ಸ್ ಮಾರ್ಗದರ್ಶಿ ಬಿ.ಜಿ. ಅನಂತಶಯನ, ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್, ಕಾರ್ಯದರ್ಶಿ ಕೆ. ವಸಂತ್ ಕುಮಾರ್, ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯದರ್ಶಿ ಪಿ.ಆರ್. ರಾಜೇಶ್, ರೋಟರಿ ಜಿಲ್ಲಾ ಕಾರ್ಯದರ್ಶಿ ವಿವೇಕ್ ಅತ್ತಾವರ್, ಜಂಟಿ ಕಾರ್ಯದರ್ಶಿ ವಿಜಯೇಂದ್ರ ಸೇರಿದಂತೆ ರೋಟರಿ ವುಡ್ಸ್ ಸದಸ್ಯರು ಪಾಲ್ಗೊಂಡಿದ್ದರು.