ಚೆಟ್ಟಳ್ಳಿ, ಜೂ. ೧೮: ನಿತ್ಯವೂ ಆಟ-ಪಾಠದಿಂದ ಕಾಲ ಕಳೆಯುತ್ತಿದ್ದ ಶಾಲಾ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ದೃಶ್ಯ ಮಡಿಕೇರಿ ತಾಲೂಕಿನ ಕಡಗದಾಳು ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಚುನಾವಣೆ ಸಂದರ್ಭ ಕಂಡುಬAತು.
ಚುನಾವಣಾಧಿಕಾರಿಗಳು ನಾಮಪತ್ರ ಸಲ್ಲಿಸುವ ದಿನ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವ ಪ್ರಕ್ರಿಯೆಯನ್ನು ನಡೆಸಿ ಚುನಾವಣಾ ಸ್ಪರ್ಧಿಗಳ ಅಂತಿಮ ಪಟ್ಟಿಯನ್ನು ನೋಟೀಸ್ ಬೋರ್ಡಿನಲ್ಲಿ ಹಾಕಿದ್ದರು. ಚುನಾವಣಾ ದಿನದವರೆಗೆ ಹಲವು ಭರವಸೆಯೊಂದಿಗೆ ವಿದ್ಯಾರ್ಥಿಗಳು ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದರು.
ಚುನಾವಣಾ ದಿನದಂದು ವಿದ್ಯಾರ್ಥಿಗಳು ತಮಗೆ ಇಚ್ಚಿಸಿದ ಸ್ಪರ್ಧಿಗಳಿಗೆ ನೂತನ ತಂತ್ರಜ್ಞಾನದ ಟ್ಯಾಬ್‌ಗಳ ಮೂಲಕ ಇವಿಎಮ್‌ನ ಬಟನ್ ಒತ್ತುವ ಮೂಲಕ ಮತಚಲಾಯಿಸಿದರು. ಚುನಾವಣೆ ನಡೆಸುವಲ್ಲಿ ಶಾಲಾ ಶಿಕ್ಷಕರ ವೃಂದದವರು ಶ್ರಮಿಸಿದ್ದರು.
ಮಧ್ಯಾಹ್ನದ ನಂತರ ಚುನಾವಣಾ ಫಲಿತಾಂಶವನ್ನು ಪ್ರಕಟಿಸುತ್ತಿದ್ದಂತೆ ವಿದ್ಯಾರ್ಥಿಗಳ ಸಂಭ್ರಮ ಜೋರಾಗಿತ್ತು. ಮುಂದಿನ ನಾಲ್ಕೆöÊದು ದಿನಗಳಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುವುದರ ಮೂಲಕ ಶಾಲಾ ಸಂಸತ್ತಿನ ಶಾಲಾ ನಾಯಕ, ಸಾಂಸ್ಕೃತಿಕ, ವಾರ್ತಾ / ಶಿಕ್ಷಣ, ಕ್ರೀಡಾ, ಗ್ರಂಥಾಲಯ, ಭದ್ರತಾ, ಆರೋಗ್ಯ ತೋಟಗಾರಿಕೆ ಖಾತೆಗಳ ಹಂಚಿಕೆಯಾಗಲಿವೆೆ.
ಇಂತಹ ಶಾಲಾ ಮಟ್ಟದ ಚುನಾವಣೆಗಳು ವಿದ್ಯಾರ್ಥಿಗಳಿಗೆ ಪರಿಣಾಕಾರಿಯಾಗಲಿವೆ ಎನ್ನುತ್ತಾರೆ ಶಿಕ್ಷಕರು.
-ಕರುಣ್ ಕಾಳಯ್ಯ