ನಾಪೋಕ್ಲು, ಜೂ. ೧೮: ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಪ್ರಸಕ್ತ ಸಾಲಿನ ಉತ್ತಮ ಸಾರ್ವಜನಿಕ ಸ್ನೇಹಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕೊಡಗು ಜಿಲ್ಲಾ ಪಂಚಾಯತ್ ಮಡಿಕೇರಿ ಮತ್ತು ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಈ ಪ್ರಶಸ್ತಿಯನ್ನು ಮಡಿಕೇರಿಯಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಓ ಅಶೋಕ್, ಅಧ್ಯಕ್ಷ ಕಲಿಯಂಡ ಸಂಪನ್ನ ಅವರು ಸ್ವೀಕರಿಸಿದರು.