ಕುಡೆಕಲ್ ಸಂತೋಷ್ ಮಡಿಕೇರಿ, ಜೂ. ೧೭: ಕೊಡಗು ಎಂದಾಕ್ಷಣ ಎಲ್ಲರಿಗೂ ನೆನಪಾಗುವದು ಸೈನಿಕರು., ವಿಶ್ವ ಭೂಪಟದಲ್ಲೇ ಯೋಧರ ನಾಡು ಎಂದೇ ಗುರುತಿಸಿಕೊಂಡಿರುವ ಜಿಲ್ಲೆ ಕೊಡಗು., ರಾಷ್ಟçದ ಪ್ರಪ್ರಥಮ ಮಹಾನ್ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯರಂತಹ ವೀರ ಸೇನಾನಿಗಳನ್ನು ಕೊಡುಗೆಯಾಗಿ ನೀಡಿರುವ ಜಿಲ್ಲೆ., ಈಗಲೂ ನೂರಾರು ಸೇನಾನಾಯಕರು, ಸಹಸ್ರಾರು ಯೋಧರನ್ನು ಸಮರ್ಪಣೆ ಮಾಡಿರುವ ಜಿಲ್ಲೆ., ಪ್ರಾಣದ ಹಂಗು ತೊರೆದು ತಾಯಿನಾಡಿನ ರಕ್ಷಣೆಗಾಗಿ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರನ್ನು ಸಮರ್ಪಿಸಿರುವಂತಹ ಈ ಜಿಲ್ಲೆಯಲ್ಲಿ ಯೋಧ ಹಾಗೂ ಆತನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಅದೂ ಕೂಡ ಮಹಾನ್ ದಂಡನಾಯಕ ಫೀ.ಮಾ. ಕಾರ್ಯಪ್ಪ ಅವರು ಜನಿಸಿದ, ಸೋಮವಾರಪೇಟೆ ತಾಲೂಕಿಗೆ ಒಳಪಡುವ ಯಡೂರು ಎಂಬ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಇದರಿಂದಾಗಿ ಯೋಧ ಹಾಗೂ ಕುಟುಂಬಕ್ಕೆ ಅವಮಾನವಾದಂತಾಗಿದ್ದು, ಈ ಸಂಬAಧ ಸೇನಾ ನೆಲೆಯಿಂದ ಪ್ರಕರಣದ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಪತ್ರ ಕಳುಹಿಸಲಾಗಿದ್ದರೂ ಜಿಲ್ಲಾಡಳಿತ ಮಾತ್ರ ಮೌನಕ್ಕೆ ಶರಣಾಗಿದೆ.
ಗ್ರಾಮದಲ್ಲಿ ಅಹಿತಕರ ಘಟನೆ, ಕಳ್ಳತನ, ಅಪರಾಧ ಅಥವಾ ಏನಾದರೂ ಸಮಸ್ಯೆಗಳು ಉಂಟಾದಲ್ಲಿ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಗ್ರಾಮದ ಹೆಸರು ಹಾಳಾಗಬಾರದೆಂಬ ಸದುದ್ದೇಶದಿಂದ ಹಿಂದಿನ ಕಾಲದ ಪೂರ್ವಜರು ಗ್ರಾಮ ಸಮಿತಿಯನ್ನು ರಚಿಸಿಕೊಂಡು ಪಂಚಾಯ್ತಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದರು. ಪಂಚಾಯ್ತಿಯ ತೀರ್ಮಾನವೇ ಅಂತಿಮವಾಗಿರುತ್ತಿತ್ತು. ಇದೇ ಕಟ್ಟುಪಾಡುಗಳನ್ನು ಯಡೂರು ಗ್ರಾಮಸ್ಥರು ಮುಂದುವರಿಸಿಕೊAಡು ಬರುತ್ತಿದ್ದಾರೆ. ಗ್ರಾಮ ಸಮಿತಿಯ ತೀರ್ಮಾನಕ್ಕೆ ಗ್ರಾಮಸ್ಥರೆಲ್ಲರೂ ಇಂದಿಗೂ ಬದ್ಧರಾಗಿದ್ದಾರೆ.
ಗ್ರಾಮ ಸಮಿತಿಯ ತೀರ್ಮಾನವೇ ಇಲ್ಲಿ ಅಂತಿಮವಾಗಿರುತ್ತದೆ. ಗ್ರಾಮದ ಒಳಿತಿಗಾಗಿ ಕೈಗೊಳ್ಳುವ ಇಂತಹ ತೀರ್ಮಾನಗಳು ಸ್ವಾಗತಾರ್ಹವಾಗಿದೆ. ಆದರೆ ಈ ಪ್ರಕರಣದಲ್ಲಿ ಗ್ರಾಮಕ್ಕೆ ಸಂಬAಧಪಡದಿರುವ ವೈಯಕ್ತಿಕ ವಹಿವಾಟಿನ ವಿಚಾರಕ್ಕೆ ಸಂಬAಧಿಸಿದAತೆ ಒಂದು ಕುಟುಂಬವನ್ನೇ ಬಹಿಷ್ಕಾರ ಮಾಡಲಾಗಿದೆ. ಗ್ರಾಮ ಸಮಿತಿಯ ಒಂದು ಸಣ್ಣ ತಪ್ಪು ನಿರ್ಧಾರದಿಂದಾಗಿ ಯೋಧನ ಕುಟುಂಬ ಅವಮಾನ ಸಹಿಸುವಂತಾಗಿದೆಯಲ್ಲದೆ ಇದೀಗ ಜಿಲ್ಲಾಡಳಿತ ಸೇನಾ ನೆಲೆಯ ಪತ್ರಕ್ಕೆ ಉತ್ತರ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ.
(ಮೊದಲ ಪುಟದಿಂದ)
ಏನಿದು ಪ್ರಕರಣ..?
ದೆಹಲಿ ಮೂಲದ ಪಲ್ಸ್ ಅಗ್ರೋ ಕಾರ್ಪೊರೇಷನ್ ಲಿಮಿಟೆಡ್ (ಪಿಎಸಿಎಲ್) ಖಾಸಗಿ ಹಣ ಹೂಡಿಕೆದಾರ ಸಂಸ್ಥೆಯೊAದು ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ದೇಶಾದ್ಯಂತ ಕೋಟ್ಯಂತರ ಮಂದಿ ಇದರಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಆದರೆ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಆರ್ಬಿಐ ರೂಪಿಸಿರುವ ನಿಯಮಗಳನ್ನು ಪಿಎಸಿಎಲ್ ಸರಿಯಾಗಿ ಪಾಲಿಸಿಲ್ಲ ಎಂದು ಸೆಕ್ಯುರಿಟಿ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ದಿಂದ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
ಸಿಬಿಐನಿಂದಲೂ ವಿಚಾರಣೆ ನಡೆಯುತ್ತಿದ್ದುದರಿಂದ ಪಿಎಸಿಎಲ್ನ ಎಲ್ಲಾ ಹಣಕಾಸು ವ್ಯವಹಾರ ಹಾಗೂ ೧೫೦ಕ್ಕೂ ಹೆಚ್ಚು ಖಾತೆಗಳನ್ನು ೨೦೧೩ ರಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಕಳೆದ ಫೆ. ೨ ರಂದು ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧ ಅವರ ನೇತೃತ್ವದಲ್ಲಿ ೮ ಮಂದಿಯನ್ನೊಳಗೊAಡ ಸಮಿತಿಯನ್ನು ರಚಿಸಿ ಪಿಎಸಿಎಲ್ಗೆ ಸೇರಿದ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಹೂಡಿಕೆದಾರರಿಗೆ ಹಿಂತಿರುಗಿಸುವAತೆ ಆದೇಶ ನೀಡಿದೆ.
ವಾಪಸ್ ಪಡೆಯಲು ಅವಕಾಶ
ಈ ಹಿನ್ನೆಲೆಯಲ್ಲಿ ಲೋಧ ಅವರ ಸಮಿತಿ ಕಳೆದ ಮಾರ್ಚ್ ೨೭ ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಹಣ ಹೂಡಿಕೆ ಮಾಡಿರುವ, ಹಣ ಹಿಂಪಡೆಯಲು ಅರ್ಹರಾಗಿರುವ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿದ್ದು, ಅವರುಗಳ ಮೊಬೈಲ್ಗಳಿಗೆ ಸಂದೇಶ ಬರುತ್ತದೆ. ಸಂದೇಶ ಬಂದ ಕೂಡಲೇ ಸಂಸ್ಥೆ ವತಿಯಿಂದ ನೀಡಲಾಗಿರುವ ಮೂಲ ಸರ್ಟಿಫಿಕೇಟ್ (ಬಾಂಡ್) ಅನ್ನು ಅಂಚೆಪೆಟ್ಟಿಗೆ ಸಂಖ್ಯೆ ೬೬, ಬೇಲಪುರ್ ಅಂಚೆ ಕಚೇರಿ, ನವದೆಹಲಿ - ೪೦೦೬೧೪ ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ಸೂಚನೆ ನೀಡಿತ್ತು. ಬಾಂಡ್ ಕಳುಹಿಸಿಕೊಡಲು ಏಪ್ರಿಲ್ ೧ ರಿಂದ ಜೂನ್ ೩೦ರವರೆಗೆ ಅವಕಾಶವನ್ನೂ ಕೂಡ ನೀಡಲಾಗಿದೆ.
ಹಣ ವಾಪಾಸು ನೀಡಲು ಒತ್ತಾಯ
ಪಿಎಸಿಎಲ್ ಸಂಸ್ಥೆಯ ಏಜೆಂಟರಾಗಿ ಯಡೂರು ಗ್ರಾಮದ ಲಿಂಗರಾಜು ಅವರ ಪತ್ನಿ ಪಾರ್ವತಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಮೂಲಕ ಯಡೂರಿನಲ್ಲಿ ಸುಮಾರು ೨೦ ಮಂದಿ ಹಾಗೂ ಬೇರೆ ಕಡೆಗಳಲ್ಲಿ ಕೆಲವರು ಹಣ ಹೂಡಿಕೆ ಮಾಡಿದ್ದರು. ರೂ. ೧೦,೦೦೦ ಹಾಗೂ ರೂ. ೧೫ ಸಾವಿರ ಮೊತ್ತದ ಎರಡು ವಿಭಾಗಗಳಲ್ಲಿ ಹಣ ಹೂಡಬೇಕಿದ್ದು, ಕಂತುಗಳ ಪ್ರಕಾರ ೧೨ ವರ್ಷಗಳ ಕಾಲ ಕಟ್ಟಬೇಕಿದೆ. ಕಟ್ಟಿದ ಹಣದ ಮೊತ್ತಕ್ಕೆ ರಸೀದಿ ಹಾಗೂ ಸರ್ಟಿಫಿಕೇಟ್ (ಬಾಂಡ್) ನೀಡಲಾಗುತ್ತದೆ. ಪಾರ್ವತಿ ಹಾಗೂ ಲಿಂಗರಾಜು ಅವರುಗಳು ತಮ್ಮ ಗ್ರಾಹಕರಿಗೆ ನೀಡಿದ್ದಾರೆ. ಪ್ರತಿವರ್ಷ ಮಾರ್ಚ್ನಲ್ಲಿ ಸುಗ್ಗಿ ಹಬ್ಬದ ಸಂಬAಧ ನಡೆಯುವ ಗ್ರಾಮ ಸಮಿತಿ ಸಭೆಯಲ್ಲಿಯೇ ರಸೀದಿಯನ್ನು ನೀಡುತ್ತಿದ್ದುದಾಗಿ ಲಿಂಗರಾಜು ದಂಪತಿ ಹೇಳುತ್ತಾರೆ.
ಆದರೆ, ಇದೀಗ ಗ್ರಾಹಕರು ತಾವು ಕಟ್ಟಿದ ಹಣವನ್ನು ಹಿಂತಿರುಗಿಸುವAತೆ ಲಿಂಗರಾಜು ಅವರ ಮೇಲೆ ಒತ್ತಾಯ ಹೇರಿದ್ದಾರೆ. ತಾನು ಹಣವನ್ನು ಸಂಸ್ಥೆಗೆ ಪಾವತಿ ಮಾಡಿಯಾಗಿದ್ದು, ತನ್ನಿಂದ ಕಟ್ಟಲು ಸಾಧ್ಯವಿಲ್ಲ ಎಂದು ನಿರಾಕರಿಸಿದ ಕಾರಣಕ್ಕೆ ಇದೀಗ ಈ ಕುಟುಂಬವನ್ನು ಬಹಿಷ್ಕಾರ ಮಾಡಲಾಗಿದೆ.
ಏಪ್ರಿಲ್ನಲ್ಲಿ ಬಹಿಷ್ಕಾರ..!
ವರ್ಷಂಪ್ರತಿ ಯಡೂರಿನಲ್ಲಿ ಏಪ್ರಿಲ್ ೨೨ ರಂದು ಸುಗ್ಗಿ ಹಬ್ಬ ನಡೆಯಲಿದೆ. ಈ ಹಬ್ಬದ ಸಂಬAಧ ಗ್ರಾಮದಲ್ಲಿ ಗ್ರಾಮ ಸಮಿತಿ ಸಭೆ ನಡೆಯುತ್ತದೆ. ಈ ಬಾರಿಯೂ ಏಪ್ರಿಲ್ ೧೦ ರಂದು ಸಭೆ ನಡೆದಿದೆ. ಅಂದು ನಡೆದ ಸಭೆಯಲ್ಲಿ ಎಎಸಿಎಲ್ನಲ್ಲಿ ಹಣ ಹೂಡಿಕೆ ಮಾಡಿರುವ ಕೆಲವರು ಇತರ ಹೂಡಿಕೆದಾರರಿಂದಲೂ ಸಹಿ ಮಾಡಿಸಿಕೊಂಡು ಗ್ರಾಮ ಸಮಿತಿಗೆ ದೂರು ಸಲ್ಲಿಸಿದ್ದಾರೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಲಿಂಗರಾಜು ಅವರು ತಮ್ಮ ಸ್ವಂತ ಹಣದಿಂದ ಹಿಂತಿರುಗಿಸಬೇಕೆAದು ಹೇಳಲಾಗಿದೆ. ಇದಕ್ಕೆ ಲಿಂಗರಾಜು ಒಪ್ಪಿಗೆ ನೀಡದ್ದರಿಂದ ಕೆಲವರು ಇಡೀ ಕುಟುಂಬವನ್ನು ಬಹಿಷ್ಕಾರ ಮಾಡಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಮಿತಿ ಸಭೆ ಬಹಿಷ್ಕಾರದ ತೀರ್ಮಾನ ಕೈಗೊಂಡಿದೆ.
ಲಿAಗರಾಜು, ಪತ್ನಿ ಪಾರ್ವತಿ, ಪುತ್ರರಾದ ಸಂದೇಶ್, ಸಂತೋಷ್ ಹಾಗೂ ಸಂಜಯ್ ಕುಟುಂಬವನ್ನು ಬಹಿಷ್ಕಾರ ಮಾಡಲಾಗಿದೆ. ಮೂವರು ಪುತ್ರರ ಪೈಕಿ ಸಂಜಯ್ ಭಾರತೀಯ ಸೇನೆಯ ೩೭ನೇ ಕೂರ್ಗ್ ಫೀಲ್ಡ್ ರೆಜಿಮೆಂಟ್ನಲ್ಲಿ ಲ್ಯಾನ್ಸ್ ಹವಾಲ್ದಾರ್ ಆಗಿ ಪ್ರುಸ್ತುತ ಪಂಜಾಬ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಧನ ಕುಟುಂಬ ಆಗಿರುವದರಿಂದ ಇದರಿಂದ ತೊಂದರೆ ಆಗಬಹುದು, ಬಹಿಷ್ಕಾರ ಸಲ್ಲದೆಂದು ಕೆಲವರು ಸಲಹೆ ಮಾಡಿದರೂ ಸಮಿತಿ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಕಾರ್ಮಿಕರಿಗೂ ಬಹಿಷ್ಕಾರ...!
ಲಿಂಗರಾಜು ಅವರ ತೋಟದಲ್ಲಿ ಜೋಯಪ್ಪ ಹಾಗೂ ರಾಮಣ್ಣ ಎಂಬಿಬ್ಬರು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕೆಲಸ ಇದ್ದಾಗ ಲಿಂಗರಾಜು ಅವರ ತೋಟದಲ್ಲಿ ಇತರ ಸಮಯಗಳಲ್ಲಿ ಗ್ರಾಮದ ಬೇರೆ ಕಡೆಗಳಿಗೆ ಕೆಲಸಕ್ಕೆ ತೆರಳುತ್ತಾರೆ. ಆದರೆ, ಇದೀಗ ಲಿಂಗರಾಜು ಅವರ ಕುಟುಂಬವನ್ನು ಬಹಿಷ್ಕಾರ ಮಾಡಿರುವ ಹಿನ್ನೆಲೆಯಲ್ಲಿ ಅವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿರುವ ಕಾರ್ಮಿಕರಿಗೂ ಬಹಿಷ್ಕಾರ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿರುವ ಈ ಕಾರ್ಮಿಕರ ಪತ್ನಿಯರು ಬೇರೆ ಕಡೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದು ಅದಕ್ಕೂ ಬಹಿಷ್ಕಾರ ಹಾಕಲಾಗಿದೆ. ಇವರುಗಳಿಗೆ ಯಾರೂ ಕೂಡ ಕೆಲಸ ನೀಡದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಈರ್ವರ ಪೈಕಿ ರಾಮಣ್ಣ ಅವರ ಪತ್ನಿ ಲಲಿತಾ ಎಂಬವರು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ. ಆದರೂ ಅವರಿಗೆ ಬಹಿಷ್ಕಾರ ಹಾಕಲಾಗಿದೆ.
‘ನಾವು ಲಿಂಗರಾಜು ಅವರ ಬಳಿ ಸಾಲ ಮಾಡಿದ್ದೆವು., ಕಷ್ಟದಲ್ಲಿದ್ದಾಗ ಅವರು ನಮಗೆ ಸಹಾಯ ಮಾಡಿದ್ದಾರೆ. ಹಾಗಾಗಿ ನಾವು ಸಾಲ ತೀರಿಸಲಾದರೂ ಕೆಲಸಕ್ಕೆ ಅವರಲ್ಲಿಗೆ ಹೋಗಬೇಕಿದೆ. ಇದೀಗ ಬೇರೆ ಎಲ್ಲಿಯೂ ಕೆಲಸ ಇಲ್ಲದಂತೆ ಮಾಡಿದ್ದಾರೆ. ಹೀಗೆ ಮಾಡಿದರೆ ನಾವು ಬದುಕುವದಾದರೂ ಹೇಗೆ...?’ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಕಾನೂನು ಕ್ರಮಕ್ಕೆ ಅವಕಾಶವಿದೆ..!
ಈ ಪ್ರಕರಣದಲ್ಲಿ ಲಿಂಗರಾಜು ಕುಟುಂಬದ ತಪ್ಪೇನೂ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಸಂಸ್ಥೆಯ ಏಜೆಂಟರಾಗಿ ತಮ್ಮ ಕರ್ತವ್ಯ ಮಾಡಿದ್ದಾರೆ. ಆದರೆ ಸಂಸ್ಥೆಯ ನಿಯಮ ಸರಿ ಇಲ್ಲ ಎಂಬ ಕಾರಣಕ್ಕೆ ಕೇಂದ್ರ ಸರಕಾರ ಸಂಸ್ಥೆಯನ್ನು ಮುಟ್ಟುಗೋಲು ಹಾಕಿಕೊಂಡಿದೆಯಷ್ಟೇ. ಇದರಲ್ಲಿ ಲಿಂಗರಾಜು ಅವರ ಮೂಲಕ ಹಣ ಹೂಡಿಕೆ ಮಾಡಿದವರು ಮಾತ್ರವಲ್ಲ ದೇಶಾದ್ಯಂತ ಕೋಟ್ಯಂತರ ಮಂದಿ ಇದ್ದಾರೆ. ಬಹಿಷ್ಕಾರ ಮಾಡುವದಾದರೆ ಅಷ್ಟೂ ಮಂದಿಯ ಏಜೆಂಟರುಗಳು, ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳನ್ನು ಬಹಿಷ್ಕಾರ ಮಾಡಬೇಕಾಗುತ್ತದೆ. ಇಲ್ಲಿ ಬೇಕಿರುವುದು ಕಟು ನಿರ್ಧಾರವಲ್ಲ. ಒಂದಿಷ್ಟು ವಿವೇಚನೆಯಷ್ಟೇ. ಒಂದು ವೇಳೆ ಗ್ರಾಹಕರಿಗೆ ಲಿಂಗರಾಜು ವಂಚನೆ ಮಾಡಿದ್ದರೆ ಅವರ ಮೇಲೆ ವಂಚನೆ ಪ್ರಕರದಡಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಆ ಮೂಲಕ ಕಾನೂನಡಿಯಲ್ಲಿ ಕ್ರಮಕೈಗೊಳ್ಳಲು ಸಾಧ್ಯತೆಯಿದೆ. ಅದನ್ನು ಹೊರತುಪಡಿಸಿ ಬಹಿಷ್ಕಾರ ಹಾಕಲು ಪ್ರಜಾಪ್ರಭುತ್ವ, ಸಂವಿಧಾನದಡಿಯಲ್ಲಿ ಎಲ್ಲಿಯೂ ಅವಕಾಶವಿಲ್ಲ.
ಹಿಂದೆ ಅಸ್ಪೃಶ್ಯತೆ, ಸತಿಸಹಗಮನ, ಜೀತ, ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗಳಿದ್ದವು. ಸಾಮಾಜಿಕ ಹೋರಾಟಗಾರರು, ಸಾಧುಗಳು, ಸಂತರು - ಶರಣರ ವಿರೋಧ - ಹೋರಾಟಗಳಿಂದ ಅವುಗಳನ್ನು ನಿರ್ಮೂಲನೆ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಪ್ರಬುದ್ಧ ಭಾರತ ದೇಶದಲ್ಲಿ ಇನ್ನೂ ಇಂತಹ ಪದ್ಧತಿ ಜೀವಂತ ಇದೆ ಎಂದಾದರೆ ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ವಿಚಾರವೇ ಸರಿ...! ಕಾರ್ಮಿಕರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಕಾನೂನು ಕ್ರಮಕ್ಕೆ ಅವಕಾಶವಿದೆ..!
ಈ ಪ್ರಕರಣದಲ್ಲಿ ಲಿಂಗರಾಜು ಕುಟುಂಬದ ತಪ್ಪೇನೂ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಸಂಸ್ಥೆಯ ಏಜೆಂಟರಾಗಿ ತಮ್ಮ ಕರ್ತವ್ಯ ಮಾಡಿದ್ದಾರೆ. ಆದರೆ ಸಂಸ್ಥೆಯ ನಿಯಮ ಸರಿ ಇಲ್ಲ ಎಂಬ ಕಾರಣಕ್ಕೆ ಕೇಂದ್ರ ಸರಕಾರ ಸಂಸ್ಥೆಯನ್ನು ಮುಟ್ಟುಗೋಲು ಹಾಕಿಕೊಂಡಿದೆಯಷ್ಟೇ. ಇದರಲ್ಲಿ ಲಿಂಗರಾಜು ಅವರ ಮೂಲಕ ಹಣ ಹೂಡಿಕೆ ಮಾಡಿದವರು ಮಾತ್ರವಲ್ಲ ದೇಶಾದ್ಯಂತ ಕೋಟ್ಯಂತರ ಮಂದಿ ಇದ್ದಾರೆ. ಬಹಿಷ್ಕಾರ ಮಾಡುವದಾದರೆ ಅಷ್ಟೂ ಮಂದಿಯ ಏಜೆಂಟರುಗಳು, ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳನ್ನು ಬಹಿಷ್ಕಾರ ಮಾಡಬೇಕಾಗುತ್ತದೆ. ಇಲ್ಲಿ ಬೇಕಿರುವುದು ಕಟು ನಿರ್ಧಾರವಲ್ಲ. ಒಂದಿಷ್ಟು ವಿವೇಚನೆಯಷ್ಟೇ. ಒಂದು ವೇಳೆ ಗ್ರಾಹಕರಿಗೆ ಲಿಂಗರಾಜು ವಂಚನೆ ಮಾಡಿದ್ದರೆ ಅವರ ಮೇಲೆ ವಂಚನೆ ಪ್ರಕರದಡಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಆ ಮೂಲಕ ಕಾನೂನಡಿಯಲ್ಲಿ ಕ್ರಮಕೈಗೊಳ್ಳಲು ಸಾಧ್ಯತೆಯಿದೆ. ಅದನ್ನು ಹೊರತುಪಡಿಸಿ ಬಹಿಷ್ಕಾರ ಹಾಕಲು ಪ್ರಜಾಪ್ರಭುತ್ವ, ಸಂವಿಧಾನದಡಿಯಲ್ಲಿ ಎಲ್ಲಿಯೂ ಅವಕಾಶವಿಲ್ಲ.
ಹಿಂದೆ ಅಸ್ಪೃಶ್ಯತೆ, ಸತಿಸಹಗಮನ, ಜೀತ, ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗಳಿದ್ದವು. ಸಾಮಾಜಿಕ ಹೋರಾಟಗಾರರು, ಸಾಧುಗಳು, ಸಂತರು - ಶರಣರ ವಿರೋಧ - ಹೋರಾಟಗಳಿಂದ ಅವುಗಳನ್ನು ನಿರ್ಮೂಲನೆ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಪ್ರಬುದ್ಧ ಭಾರತ ದೇಶದಲ್ಲಿ ಇನ್ನೂ ಇಂತಹ ಪದ್ಧತಿ ಜೀವಂತ ಇದೆ ಎಂದಾದರೆ ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ವಿಚಾರವೇ ಸರಿ...!