ಸುಂಟಿಕೊಪ್ಪ, ಜೂ. ೧೭: ಸರಕಾರಿ ಬಸ್ ಬ್ರೇಕ್ ವಿಫಲಗೊಂಡ ಪರಿಣಾಮ ರಸ್ತೆ ಬದಿ ವಾಲಿದೆ. ಕೆ.ಆರ್. ನಗರದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಸುಂಟಿಕೊಪ್ಪ ಸಮೀಪದ ಬಾಳೆಕಾಡು ಸಮೀಪ ಇಳಿಜಾರಿನಲ್ಲಿ ಸಂಜೆ ವೇಳೆ ಬ್ರೇಕ್ ವಿಫಲಗೊಂಡಿದೆ. ಇದನ್ನು ಅರಿತ ಚಾಲಕ ಕೂಡಲೇ ಬಸ್ ಅನ್ನು ಹೆÀದ್ದಾರಿ ಬದಿಯ ಬರೆ ಕಡೆಗೆ ತಿರುಗಿಸಿ ಬಸ್ ನಿಲ್ಲುವಂತೆ ಮಾಡಿದ್ದಾರೆ. ಬಸ್ ಹಾಗೇ ಮುಂದಕ್ಕೆ ಚಲಿಸಿದ್ದರೆ ಬಲಬದಿಯ ಕೆರೆಗೆ ಅಥವಾ ತಿರುವಿನಲ್ಲಿದ್ದ ಹೊಂಡಕ್ಕೆ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಠಾಣಾ ಎಎಸ್ಐ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.