ಮಡಿಕೇರಿ, ಜೂ. ೧೬: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಮಳೆ ಆರಂಭದ ಸನ್ನಿವೇಶದಲ್ಲಿ ರೈತರಿಗೆ ಅಗತ್ಯ ಪ್ರಮಾಣದಲ್ಲಿ ವಿವಿಧ ರೀತಿಯ ರಸಗೊಬ್ಬರಗಳು ಲಭ್ಯವಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಯೂರಿಯಾ, ಡಿಎಪಿ, ಎಂಓಪಿಯAತಹ ವಿವಿಧ ರೀತಿಯ ಗೊಬ್ಬರಗಳು ಪ್ರಸ್ತುತದ ಅಗತ್ಯವಾಗಿದೆ. ಆದರೆ ಅಗತ್ಯವಿರುವ ಗೊಬ್ಬರಗಳು ಸಿಗದೆ ಸಮಸ್ಯೆಯಾ ಗುತ್ತಿರುವುದಾಗಿ ಜಿಲ್ಲೆಯ ಹಲವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಸೇರಿದಂತೆ ಗೊಬ್ಬರ ವಿತರಕರು ಹೇಳುತ್ತಿದ್ದಾರೆ.
ಈ ಬಗ್ಗೆ ‘ಶಕ್ತಿ’ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ. ಶೇಖ್ ಅವರನ್ನು ಸಂಪರ್ಕಿಸಿದಾಗ ಈ ಬಗ್ಗೆ ತಮಗೂ ಕೆಲವು ಗೊಬ್ಬರ ವಿತರಕರಿಂದ ಬೇಡಿಕೆಗಳು ಬರುತ್ತಿವೆ.
(ಮೊದಲ ಪುಟದಿಂದ) ಗೊಬ್ಬರ ಪೂರೈಸುವ ವಿವಿಧ ಕಂಪೆನಿಗಳ ಮೂಲಕ ಕೊಡಗಿನಲ್ಲಿ ರೇಖ್ ಪಾಯಿಂಟ್ ಇಲ್ಲದಿರುವ ಕಾರಣ (ದಾಸ್ತಾನು ಪೂರೈಕೆಗೆ ರೈಲ್ವೆ ಸಂಪರ್ಕ ಅಥವಾ ಬಂದರು) ಜಿಲ್ಲೆಗೆ ಗೊಬ್ಬರ ಸರಬರಾಜಿಗೆ ಮೈಸೂರು ಅಥವಾ ಹಾಸನವನ್ನು ಅವಲಂಭಿಸಬೇಕಿದೆ. ಆದರೂ ಸರಕಾರದಿಂದ ಪ್ರತಿ ತಿಂಗಳು ಜಿಲ್ಲೆಗೆ ಇಂತಿಷ್ಟು ಪ್ರಮಾಣದ ಗೊಬ್ಬರ ಪೂರೈಕೆಗೆ ವ್ಯವಸ್ಥೆಯಿದ್ದು, ಈ ಬಗ್ಗೆ ಸಂಬAಧಿಸಿದ ಕಂಪೆನಿಗಳ ಜತೆಗೂ ಇಲಾಖೆ ಸತತವಾಗಿ ವ್ಯವಹರಿಸುತ್ತಿದೆ ಎಂದು ತಿಳಿಸಿದರು.
ಮೊದಲೇ ಇಂಡೆAಟ್ ನೀಡುತ್ತಿರುವ ಸಂಘಗಳಿಗೆ ಹಾಗೂ ವಿತರಕರಿಗೆ ಗೊಬ್ಬರ ಪೂರೈಸಲು ಪ್ರಯತ್ನ ನಡೆಸಲಾಗುತ್ತಿದೆ. ಜೂನ್ ಮಾಸಾಂತ್ಯದೊಳಗೆ ವಿವಿಧ ಕಂಪೆನಿಗಳ ಮೂಲಕ ಕೊಡಗು ಜಿಲ್ಲೆಗೆ ಬರಬೇಕಾಗಿರುವ ಸುಮಾರು ೧೦ ಸಾವಿರ ಮೆಟ್ರಿಕ್ಟನ್ ಗೊಬ್ಬರವನ್ನು ಪೂರ್ಣಪ್ರಮಾಣದಲ್ಲಿ ತರಿಸಲು ಕ್ರಮವಹಿಸಲಾಗುತ್ತಿದೆ. ಅಲ್ಲದೆ ಪ್ರಸ್ತುತ ಮೈಸೂರು , ಹಾಸನದಿಂದ ದಿನಂಪ್ರತಿ ಸರಬರಾಜು ಆಗುತ್ತಿದ್ದು, ಬೇಡಿಕೆ ಪೂರೈಸುವ ಪ್ರಯತ್ನ ನಡೆಯುತ್ತಿರುವುದಾಗಿ ಅವರು ಮಾಹಿತಿಯಿತ್ತರು.
ಇದು ಜಂಟಿಕೃಷಿ ನಿರ್ದೇಶಕರು ಹೇಳುತ್ತಿರುವ ವಿವರವಾಗಿದೆ. ಆದರೆ ಕೆಲವು ಮೂಲಗಳ ಪ್ರಕಾರ ‘ಶಕ್ತಿ’ಗೆ ತಿಳಿದು ಬಂದAತೆ ಉಕ್ರೇನ್ ಯುದ್ಧದ ಪರಿಣಾಮದಿಂದಲೂ ದೇಶದಲ್ಲಿ ಗೊಬ್ಬರ ಲಭ್ಯತೆಗೆ ಕಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಮೈಸೂರು - ಹಾಸನ ಮತ್ತಿತರ ಕಡೆಯಿಂದ ಜಿಲ್ಲೆಗೆ ಗೊಬ್ಬರ ತರುವ ಟ್ರಕ್ಗಳು ವಾಪಾಸ್ಸು ಖಾಲಿಯಾಗಿ ತೆರಳಬೇಕೆಂಬ ಕಾರಣದಿಂದಲೂ ಟ್ರಕ್ ಮಾಲೀಕರು ಹಿಂದೇಟು ಹಾಕುತ್ತಿರುವದು ವ್ಯತ್ಯಯಕ್ಕೆ ಮತ್ತೊಂದು ಕಾರಣ ಎನ್ನಲಾಗುತ್ತಿದೆ.
ಇದೀಗ ಜಿಲ್ಲೆಗೆ ಕರಾರಿನಂತೆ ಗೊಬ್ಬರ ಒದಗಿಸಬೇಕಿರುವ ನಿರ್ದಿಷ್ಟ ಕಂಪೆನಿ - ಸಂಸ್ಥೆಗಳೊAದಿಗೆ ಇಲಾಖೆ ನಿರಂತರವಾಗಿ ವ್ಯವಹರಿಸುತ್ತಿರುವುದರಿಂದ ಈ ತಿಂಗಳ ಅಂತ್ಯದೊಳಗೆ ಪ್ರಸ್ತುತ ಅಗತ್ಯವಿರುವ ಪ್ರಮಾಣದಷ್ಟು ಗೊಬ್ಬರ ರೈತರಿಗೆ ಸರಬರಾಜು ಆಗಲಿದೆ ಎಂದು ಹೇಳಲಾಗುತ್ತಿದೆ.