ಮಡಿಕೇರಿ, ಜೂ. ೧೭: ಅಂರ‍್ರಾಷ್ಟಿçÃಯ ಯೋಗಾದಿನಾಚರಣೆ ಅಂಗವಾಗಿ ಸಿರಿಗನ್ನಡ ವೇದಿಕೆ ವತಿಯಿಂದ ಗೂಗಲ್‌ಮೀಟ್ ಮೂಲಕ ಯೋಗದ ಮಹತ್ವದ ಬಗ್ಗೆ ವಿಚಾರ ಮಂಡನೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಷ್ಟಿçÃಯ ಯೋಗಗುರು ಪೋಡಮಾಡ ಭವಾನಿ ನಾಣಯ್ಯ ಅವರು ಆಸಕ್ತರ ಪ್ರಶ್ನೆಗಳಿಗೆ ಉತ್ತರಿಸಿ ಯೋಗದ ಪ್ರಯೋಜನ, ಪ್ರಾಣಾಯಾಮ ಮತ್ತು ಧ್ಯಾನದ ಮಹತ್ವದ ಕುರಿತು ವಿವರಿಸಿದರು.

ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ, ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷೆ ಚಿಮ್ಮಚ್ಚಿರ ಪವಿತ ರಜನ್ ಹಾಗೂ ಬೆಂಗಳೂರಿನ ವಕೀಲ ಬಯಣ್ಣ ಗೌಡ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಿರಿಗನ್ನಡ ವೇದಿಕೆಯ ನಾಪೋಕ್ಲು ಘಟಕದ ಅಧ್ಯಕ್ಷ ಬೊವ್ವೇರಿಯಂಡ ಡಿ. ಪೂವಣ್ಣ ನಿರೂಪಿಸಿದರು. ಕಬ್ಬಚ್ಚಿರ ರಶ್ಮಿ ಪ್ರಾರ್ಥಿಸಿ ಉಳುವಂಗಡ ಕಾವೇರಿ ಉದಯ ಸ್ವಾಗತಿಸಿದರು. ಕಾರ್ಯದರ್ಶಿ ಯಶೋಧ ವಂದಿಸಿದರು. ಯೋಗದ ಉಪಯೋಗದ ಮಾಹಿತಿಯೊಂದಿಗೆ ಭವಾನಿ ಅವರಿಂದ ಹಾಡುಗಾರಿಕೆಯೂ ನಡೆಯಿತು.