ಸೋಮವಾರಪೇಟೆ, ಜೂ. ೧೬: ತಾಲೂಕು ಕಚೇರಿಯಲ್ಲಿ ಸೋಮವಾರಪೇಟೆ ಹೋಬಳಿಗೆ ಸಂಬAಧಿಸಿದ ಪೌತಿ ಖಾತೆ ಆಂದೋಲನ ಕಾರ್ಯಕ್ರಮದಡಿ ವರ್ಗಾವಣೆ ಸಂಬAಧ ಅರ್ಜಿ ಸ್ವೀಕಾರ ಕಾರ್ಯಕ್ರಮ ತಾ. ೨೦ ರಂದು ಮಧ್ಯಾಹ್ನ ೨.೩೦ ರಿಂದ ಸಂಜೆ ೫ ಗಂಟೆಯವರೆಗೆ ತಹಶೀಲ್ದಾರ್ ಗೋವಿಂದರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಂದಾಯ ನಿರೀಕ್ಷಕ ಸಿ.ಎನ್. ಪ್ರಹ್ಲಾದ್ ತಿಳಿಸಿದ್ದಾರೆ.

ಅಂದು ಸಾರ್ವಜನಿಕರು, ರೈತರು ಪೌತಿ ಖಾತೆ ವರ್ಗಾವಣೆಗಾಗಿ ಪಹಣಿ, ಕುಟುಂಬದ ವಂಶವೃಕ್ಷ, ಮರಣ ಪ್ರಮಾಣ ಪತ್ರ, ಆಧಾರ್, ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.