ಸೋಮವಾರಪೇಟೆ, ಜೂ. ೧೬: ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿ ಮೊಕದ್ದಮೆ ದಾಖಲಾಗುತ್ತಿ ದ್ದಂತೆ ತಲೆಮರೆಸಿಕೊಂಡಿದ್ದ ಸೋಮವಾರಪೇಟೆ, ಜೂ. ೧೬: ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿ ಮೊಕದ್ದಮೆ ದಾಖಲಾಗುತ್ತಿ ದ್ದಂತೆ ತಲೆಮರೆಸಿಕೊಂಡಿದ್ದ ವರದಿಯಾಗಿದೆ.
ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಕೊಪ್ಪ ಗ್ರಾಮದ ಮಹಿಳೆ ರುಕ್ಮಿಣಿ ಎಂಬವರ ಮೇಲೆ ೧೫.೦೧.೨೦೦೪ರಂದು ಕುಂಬಾರಗಡಿಗೆ ನಿವಾಸಿ ಕಾರ್ಯಪ್ಪ ಎಂಬಾತ ಕ್ಷÄಲ್ಲಕ ವಿಚಾರಕ್ಕೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಬಗ್ಗೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
(ಮೊದಲ ಪುಟದಿಂದ) ಘಟನೆಯಿಂದ ಗಾಯಗೊಂಡ ರುಕ್ಮಿಣಿ ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಸಂದರ್ಭ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲು ನಡೆಸಿದ ಎಲ್ಲಾ ಪ್ರಯತ್ನಗಳೂ ವಿಫಲವಾಗಿದ್ದವು.
ಇದಾಗಿ ೨೦೧೦ರಲ್ಲಿ ‘ಲಾಂಗ್ ಪೆಂಡಿAಗ್ ಕೇಸ್’ನಡಿ ಈ ಮೊಕದ್ದಮೆಯನ್ನು ಅಳವಡಿಸಲಾಗಿತ್ತು. ಇದೀಗ ಆರೋಪಿ ಸುಂಟಿಕೊಪ್ಪ ಸಮೀಪದ ಕಾರೆಕೊಲ್ಲಿ ಎಸ್ಟೇಟ್ನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ೧೮ ವರ್ಷಗಳ ಬಳಿಕ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಆರೋಪಿ ೩೮ ವರ್ಷವಿದ್ದಾಗ ನಡೆಸಿದ ಕೃತ್ಯಕ್ಕೆ ೫೬ನೇ ವರ್ಷದಲ್ಲಿ ಜೈಲುವಾಸ ಅನುಭವಿಸುವಂತಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ವಿರೂಪಾಕ್ಷ, ಮುಖ್ಯಪೇದೆ ಕುಮಾರ್, ಸಿಬ್ಬಂದಿಗಳಾದ ಕೇಶವಮೂರ್ತಿ, ತೀರ್ಥೇಶ್, ರಮೇಶ್, ಬಸಪ್ಪ ಅವರುಗಳು ಭಾಗವಹಿಸಿದ್ದರು.