*ಗೋಣಿಕೊಪ್ಪ, ಜೂ. ೧೭: ರಾಜಸ್ಥಾನದ ಪುಶ್ಕರ್ ಅಜ್ಮೀರ್ನಲ್ಲಿ ತಾ. ೨೪ ರಿಂದ ೨೭ ರವರೆಗೆ ನಡೆಯುವ ರಾಷ್ಟçಮಟ್ಟದ ಥ್ರೋಬಾಲ್ ಕ್ರೀಡಾಕೂಟಕ್ಕೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಗೋಣಿಕೊಪ್ಪದ ಪಿ.ಎಂ. ನವೀನ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯದ ೪೫ನೇ ವರ್ಷದ ಹಿರಿಯ ಪುರುಷ ಮತ್ತು ಮಹಿಳೆಯರಿಗೆ ಆಯೋಜಿಸಿರುವ ಥ್ರೋಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಇದರ ಸಹಯೋಗದಲ್ಲಿ ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೊಡಗಿನಿಂದ ನವೀನ್ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈತ ಕಾವೇರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿಯಾಗಿದ್ದು, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾ ಮನೋಜ್, ಮನೋಜ್ ಕುಮಾರ್ ದಂಪತಿ ಪುತ್ರನಾಗಿದ್ದು, ಸುರೇಶ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.