ಮಡಿಕೇರಿ, ಜೂ. ೧೭: ಸುಳ್ಯದ ಕನ್ನಡ ಭವನದಲ್ಲಿ ಬೆಂಗಳೂರು ಜ್ಞಾನ ಮಂದಾರ ಅಕಾಡೆಮಿ ಆಶ್ರಯದಲ್ಲಿ ಮಿತ್ರ ಯುವಕ ಮಂಡಳಿ ಮತ್ತು ಕುರಲ್ ತುಳು ಕೂಟ ಸಹಕಾರದಲ್ಲಿ ನಡೆದ ಕನ್ನಡ ಕಲಾ ಪ್ರತಿಭೋತ್ಸವ ಸಮಾರಂಭದಲ್ಲಿ ಬಾಳೆಲೆಯ ಅನ್ವಿತ್ ಕುಮಾರ್‌ಗೆ ಕರ್ನಾಟಕ ಚೇತನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಇವರು ಬಾಳೆಲೆ ಗಣೇಶ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಭಟ್ ಹಾಗೂ ಚಂದ್ರಕಲಾಮೂರ್ತಿ ದಂಪತಿ ಪುತ್ರನಾಗಿರುವ ಅನ್ವಿತ್ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.