*ಗೋಣಿಕೊಪ್ಪ, ಜೂ. ೧೫: ಸಾಲು ಮರದ ತಿಮ್ಮಕ್ಕನ ಛದ್ಮವೇಷ, ಗಿಡ, ಮರ, ಆಕಾಶ, ಮೋಡ, ಮಳೆ ಸೇರಿದಂತೆ ವಿವಿಧ ವೇಷಗಳನ್ನು ತೊಟ್ಟು ಪರಿಸರ ಜಾಗೃತಿ ಮತ್ತು ಕಾಳಜಿಯನ್ನು ರ್ವತೊಕ್ಕಲು ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯ "ಗ್ರೀನ್ ವೇವ್ಸ್ ಇಕೋ ಕ್ಲಬ್" ಮೂಡಿಸಿತು.
ಶಾಲೆಯ ಆವರಣದ ಸುತ್ತ ವಿವಿಧ ಔಷಧಿ ಗಿಡಗಳನ್ನು ಇಕೋ ಕ್ಲಬ್ ಸದಸ್ಯ ವಿದ್ಯಾರ್ಥಿಗಳು ನೆಟ್ಟರು. ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಅವರು ಗಿಡಕ್ಕೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲೆ ಲಲಿತ ಮೊಣ್ಣಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ, ಔಷಧಿ ಸಸ್ಯಗಳ ಮಹತ್ವ ತಿಳಿಸಲಾಯಿತು. ಮುಖ್ಯ ಶಿಕ್ಷಕಿ ಮನೆಯಪಂಡ ಶೀಲಾ ಬೋಪಣ್ಣ, ಮುಖ್ಯ ಶಿಕ್ಷಕ ಪೊನ್ನಿಮಾಡ ಪ್ರದೀಪ್ ಇದ್ದರು.