ಸೋಮವಾರಪೇಟೆ, ಜೂ. ೧೫: ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನನ್ನು ಸ್ನೇಹಿತನೇ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಸಮೀಪದ ತೋಳೂರು ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ರಸನ್ನ ಎಂಬವರು ತೀವ್ರ ಗಾಯಗಳಿಂದ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಜೆ ೬ ಗಂಟೆಯ ವೇಳೆಗೆ ತೋಳೂರು ಶೆಟ್ಟಳ್ಳಿ ಗ್ರಾಮದ ಜಂಕ್ಷನ್ ಬಳಿ ಪ್ರಸನ್ನ ಮತ್ತು ಆತನ ಸ್ನೇಹಿತನ ಸತೀಶ್ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ.
ಈ ಸಂದರ್ಭ ಸ್ನೇಹಿತ ಸತೀಶ ತನ್ನ ಬಳಿಯಿದ್ದ ಚಾಕುವಿನಿಂದ ಪ್ರಸನ್ನನ ಕುತ್ತಿಗೆ, ಕೈ ಮಣಿಕಟ್ಟಿಗೆ ತೀವ್ರವಾಗಿ ಘಾಸಿಗೊಳಿಸಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಪ್ರಸನ್ನ ಅವರನ್ನು ಗ್ರಾಮಸ್ಥರೋರ್ವರು ತಮ್ಮ ವಾಹನದಲ್ಲಿ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.