ಸುಂಟಿಕೊಪ್ಪ, ಜೂ. ೧೬: ಇಲ್ಲಿಗೆ ಬೋಯಿಕೇರಿ ಇಬ್ನಿವಳವಾಡಿ ಗ್ರಾಮದ ಸ್ಯಾಂಡಲ್ ಕಾಡು ತೋಟದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಸಾರ್ವಜನಿಕರು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದ ೫ ದಿನಗಳಿಂದ ಸಮಾರು ೬ ಕ್ಕೂ ಹೆಚ್ಚು ಆನೆಗಳು ಸ್ಯಾಂಡಲ್ ಕಾಡು ತೋಟದಲ್ಲಿ ಆಹಾರ ಅರಸಿ ನಾಡಿಗೆ ಬಂದಿದ್ದು ರಾತ್ರಿ ವೇಳೆ ತೋಟದಲ್ಲಿ ಕಾಫಿ ಗಿಡಗಳನ್ನು ಹಾಗೂ ತೋಟದಲ್ಲಿ ಅಳವಡಿಸಿದ್ದ ನೀರಿನ ಪೈಪ್ಗಳನ್ನು ತುಳಿದು ನಾಶ ಪಡಿಸುತ್ತಿದ್ದು ತೋಟ ಕಾರ್ಮಿಕರ ವಸತಿ ಗೃಹದ ಬಳಿ ಬಂದು ಬಾಳೆ, ತೆಂಗು ಸೇರಿದಂತೆ ಫಲಭರಿತ ಫಸಲನ್ನು ನಾಶ ಪಡಿಸಿವೆ. ಇದರಿಂದ ತೋಟದ ಕಾರ್ಮಿಕರು ಭಯಭೀತರಾಗಿದ್ದು ತೋಟದ ಕೆಲಸಕ್ಕೆ ತೆರಳದಂತಾಗಿದೆ. ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ತೋಟದ ಮಾಲೀಕರು, ಕಾರ್ಮಿಕರು ಒತ್ತಾಯಿಸಿದ್ದಾರೆ.