ಶನಿವಾರಸಂತೆ, ಜೂ. ೧೫: ಕನ್ನಡ ಸಾಹಿತ್ಯ ಪರಿಷತ್ತು ಶನಿವಾರಸಂತೆ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಸ್ಥಳೀಯ ಕಾವೇರಿ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಘಟಕದ ನೂತನ ಅಧ್ಯಕ್ಷರಾಗಿ ಬಿ.ಬಿ. ನಾಗರಾಜ್, ಕಾರ್ಯದರ್ಶಿಗಳಾಗಿ ಎಂ.ಪಿ. ಮೋಹನ್, ಶಶಿಕಲಾ, ಕೋಶಾಧಿಕಾರಿಯಾಗಿ ಎಸ್.ಬಿ. ನಂಜಪ್ಪ, ಮಹಿಳಾ ಪ್ರತಿನಿಧಿ ಪುಷ್ಪಾ ನಾಗರಾಜ್, ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ರಾಮ್ ಕುಮಾರ್, ಸೌಭಾಗ್ಯಲಕ್ಷಿö್ಮ, ಸಂಘ - ಸಂಸ್ಥೆ ಪ್ರತಿನಿಧಿ ಸುನಂದಾ, ತಾಲೂಕು ಶಿಕ್ಷಣಾಧಿಕಾರಿ ಪ್ರತಿನಿಧಿ ಸಿ.ಕೆ. ದಿನೇಶ್, ನಿಕಟಪೂರ್ವ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿ ಮಂಡಳಿ ನಿರ್ದೇಶಕರಾಗಿ ಸಿ.ಪ್ರಕಾಶ್ ಚಂದ್ರ, ಸಿ.ಪಿ. ತೀರ್ಥಾನಂದ, ಎ.ವಿ. ವಿಶ್ವರೂಪ, ಗೋಪಾಲಕೃಷ್ಣ, ಎಸ್.ಆರ್. ಶಿವಪ್ಪ, ಚಿನ್ನಪ್ಪ ಹಾಗೂ ಖಾಯಂ ಆಹ್ವಾನಿತರಾಗಿ ೯ ಮಂದಿ ಆಯ್ಕೆಯಾಗಿದ್ದಾರೆ.
ಘಟಕದ ನೂತನ ಅಧ್ಯಕ್ಷ ಬಿ.ಬಿ. ನಾಗರಾಜ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಹಾಗೂ ಸಿ.ಪಿ.ಐ. ಪರಶಿವಮೂರ್ತಿ, ಪದಾಧಿಕಾರಿಗಳಾದ ಮುನೀರ್ ಅಹಮ್ಮದ್, ರೇವತಿ ರಮೇಶ್, ಇತರರು ಇದ್ದರು.