ಮಡಿಕೇರಿ, ಜೂ. ೧೬: ಅಂರ್ರಾಷ್ಟಿçÃಯ ಹಾಕಿಪಟು, ಇತ್ತೀಚೆಗೆ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ವೀರಾಜಪೇಟೆ ಕೊಡವ ಸಮಾಜದಲ್ಲಿ ತಾ. ೧೫ ಹಾಗೂ ೧೬ ರಂದು ನಡೆದ ಸಮಾರಂಭದಲ್ಲಿ ಪುದಿಯೊಕ್ಕಡ ಬೆಲ್ಲು ಸೋಮಯ್ಯ ಹಾಗೂ ಮೀನಾ ದಂಪತಿ ಪುತ್ರ ಪ್ರಧಾನ್, ವೀರಾಜಪೇಟೆಯ ಐಚಂಡ ಸಿ. ವಾಸು ಹಾಗೂ ಸುಮ ದಂಪತಿಯ ಪುತ್ರಿ ಬಿನ್ನಿ ಬೋಜಮ್ಮ ಅವರನ್ನು ವರಿಸಿದರು.
ಹಾಕಿಪಟು ಪ್ರಧಾನ್ ವಿವಾಹ ಸಂಭ್ರಮದಲ್ಲಿ ಹಲವಾರು ಹಾಕಿಪಟುಗಳು ಪಾಲ್ಗೊಂಡು ಶುಭ ಕೋರಿದರು.
ಮಾಜಿ ಒಲಂಪಿಯನ್ಗಳಾದ ವಿ.ಆರ್. ರಘುನಾಥ್, ನಿಕಿನ್ ತಿಮ್ಮಯ್ಯ, ಎಸ್.ಕೆ. ಉತ್ತಪ್ಪ, ಅಂರ್ರಾಷ್ಟಿçÃಯ ಆಟಗಾರರಾದ ಕೂತಂಡ ಪೂಣಚ್ಚ, ವಿ.ಎಸ್. ವಿನಯ್, ವಿಕ್ರಂಕಾAತ್, ಕೆ.ಪಿ. ಸೋಮಣ್ಣ, ಎಂ.ಬಿ ಅಯ್ಯಪ್ಪ, ನಿತಿನ್ ತಿಮ್ಮಯ್ಯ ಸೇರಿದಂತೆ ಹಲವು ರಾಷ್ಟಿçÃಯ, ರಾಜ್ಯ ಆಟಗಾರರು, ಪ್ರಧಾನ್ ಸೋಮಣ್ಣ ಪ್ರತಿನಿಧಿಸುತ್ತಿರುವ ಕೆನರಾಬ್ಯಾಂಕ್ ಹಾಕಿ ತಂಡದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.