ಗೋಣಿಕೊಪ್ಪ ವರದಿ, ಜೂ. ೧೬: ಗೋಣಿಕೊಪ್ಪ ಲಯನ್ಸ್ ಕ್ಲಬ್ ಆಡಳಿತ ಮಂಡಳಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಡಾ. ಅಮ್ಮಂಡ ಚಿಣ್ಣಪ್ಪ, ಕಾರ್ಯ ದರ್ಶಿಯಾಗಿ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪ್ರಣಿತ ಪೂಣಚ್ಚ, ಎಂ.ಜಿ. ರಾಕೇಶ್, ಎಲ್‌ಸಿಐಎಫ್ ಸಂಚಾಲಕರಾಗಿ ಪಿ.ಎಂ. ಜೀವನ್, ಖಜಾಂಚಿಯಾಗಿ ಸಿ.ಟಿ. ಅಪ್ಪಣ್ಣ, ಕ್ಲಬ್ ಸರ್ವಿಸ್ ಮುಖ್ಯಸ್ಥರಾಗಿ ಧನು ಉತ್ತಯ್ಯ, ಸದಸ್ಯತ್ವ ಘಟಕ ಮುಖ್ಯಸ್ಥರಾಗಿ ಡಾ. ಸೂರಜ್ ಉತ್ತಪ್ಪ, ಕಮ್ಯೂನಿಕೇಷನ್ ಘಟಕ ಮುಖ್ಯಸ್ಥರಾಗಿ ಪಿ.ಎನ್. ಪೆಮ್ಮಯ್ಯ, ಎ.ಎನ್. ಕರುಂಬಯ್ಯ, ಸುಜು ಪೊನ್ನಪ್ಪ, ನಿರ್ದೇಶಕರಾಗಿ ಜೆ.ಎಸ್. ಮಾದಪ್ಪ, ಪಿ.ಟಿ. ಸೋಮಯ್ಯ, ಅಲ್ಲುಮಾಡ ಸುನಿಲ್, ಕೆ.ಪಿ. ಸುಬ್ಬಯ್ಯ, ಕೆ.ಎಸ್. ಚೆಂಗಪ್ಪ, ಸಿ.ಎಂ. ಅಪ್ಪಣ್ಣ, ಸ್ಮರಣ್ ಸುಭಾಷ್, ಕೆ.ಪಿ. ಅಚ್ಚಯ್ಯ ಆಯ್ಕೆಯಾಗಿದ್ದಾರೆ.