ಚೆಟ್ಟಳ್ಳಿ, ಜೂ. ೧೬: ಮಡಿಕೇರಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಕೊಡವ ಸಮಾಜದ ಸಭಾಂಗಣದಲ್ಲಿ ನಿಟಕಪೂರ್ವ ಕೊಂಗAಡ ದೇವಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕೊಡವ ಸಮಾಜದ ಏಳಿಗೆಗೆ ಈ ಹಿಂದಿನ ಆಡಳಿತ ಮಂಡಳಿಯು ಶ್ರಮಿಸಿದೆ. ನೂತನ ಆಡಳಿತ ಮಂಡಳಿಯು ಕೊಡವ ಸಮಾಜ ಅಭಿವೃದ್ಧಿಗೆ ಹಾಗೂ ಜನಾಂಗದ ಏಳಿಗೆಗೆ ಶ್ರಮಿಸುವಂತಾಗಬೇಕೆAದು ಕೊಂಗAಡ ದೇವಯ್ಯ ಹೇಳಿದರು. ನೂತನ ಅಧ್ಯಕ್ಷ ಮುಂಡುವAಡ ಮುತ್ತಪ್ಪ, ಉಪಾಧ್ಯಕ್ಷ ನಂದಿನೆರವAಡ ಚೀಯಣ್ಣ, ಕಾರ್ಯದರ್ಶಿ ಕನ್ನಂಡ ಸಂಪತ್, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್ ಹಾಗೂ ನಿರ್ದೇಶಕ ಹಾಗೂ ಮಹಿಳಾ ನಿರ್ದೇಶಕರಿಗೆ ಆಡಳಿತವನ್ನು ಹಸ್ತಾಂತರಿಸಲಾಯಿತು.

ಮAಡುವAಡ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಜನರಲ್ ತಿಮ್ಮಯ್ಯ ಶಾಲಾ ಆಡಳಿತ ಮಂಡಳಿ ಆಯ್ಕೆಯ ಬಗ್ಗೆ ಸಮಾಜದ ಅಭಿವೃದ್ಧಿಯ ಮುಂದಿನ ರೂಪು ರೇಷೆಯ ಬಗ್ಗೆ ಚರ್ಚಿಸಲಾಯಿತು. ಬೊಟ್ಟೋಳಂಡ ಕಾಶಿಅಚ್ಚಯ್ಯ ಪ್ರಾರ್ಥಿಸಿ, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್ ವಂದಿಸಿದರು.