ಮಡಿಕೇರಿ, ಜೂ. ೧೪: ರಾಜ್ಯಮಟ್ಟದ ಸಾಹಿತ್ಯಾತ್ಮಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಸಂಸ್ಥೆಯು ತನ್ನ ೩೮ನೇ ವಾರ್ಷಿಕೋತ್ಸವದ ಹಾಗೂ ಪ್ರೇಮಕವಿ ಕೆ.ಎಸ್.ನ ಅವರ ೧೦೮ನೇ ಜನ್ಮದಿನದ ಅಂಗವಾಗಿ ರಾಜ್ಯಮಟ್ಟದ ಪ್ರೇಮಕವನಗಳ ಸ್ಪರ್ಧೆಯನ್ನು ಏರ್ಪಡಿಸಿದೆ.
ಕವನ ಸ್ಪರ್ಧೆಯಲ್ಲಿ ಅತ್ಯುತ್ತಮವೆಂದು ಆಯ್ಕೆಯಾದ ಐದು ಮಂದಿ ಹೊರನಾಡ ಕನ್ನಡಿಗರಿಗೆ, ಹತ್ತು ಮಂದಿ ರಾಜ್ಯದ ಕವಿಗಳು ಹಾಗೂ ಕವಯತ್ರಿಯರಿಗೆ ಮತ್ತು ಇಬ್ಬರು ವಿಶೇಷಚೇತನ ಕವಿಗಳಿಗೆ ಸಂಸ್ಥೆಯು ಮೈಸೂರು ನಗರದಲ್ಲಿ ನಡೆಸಲಿರುವ ಪ್ರೇಮಕವಿ ಕೆ.ಎಸ್.ನ. ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ರಾಜ್ಯಮಟ್ಟದ ಪ್ರೇಮಕವಿ ಕೆ.ಎಸ್.ನ. ಕಾವ್ಯ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಕವನ ಸಂಕಲನಕ್ಕೆ ಆಯ್ಕೆಯಾದ ಕವನಗಳನ್ನು ಪ್ರೇಮಕವಿ ಕೆ.ಎಸ್.ನ ೧೦೮ ರಾಜ್ಯಮಟ್ಟದ ಕವನ ಸಂಕಲನದಲ್ಲಿ ಪ್ರಕಟಿಸಲಾಗುವುದು. ಕವನಗಳು ೨೪ ಸಾಲುಗಳ ಮಿತಿಯಲ್ಲಿರಬೇಕು. ಒಬ್ಬರು ಎರಡು ಕವನಗಳನ್ನು ಕಳುಹಿಸಬಹುದು. ಕವನಗಳಲ್ಲಿ ಅಶ್ಲೀಲ ಪದಗಳು ಅಥವಾ ದ್ವಂದ್ವಾರ್ಥಕ ಪದಗಳನ್ನು ಬಳಸುವಂತಿಲ್ಲ. ವಾಟ್ಸಾಪ್ ಮೂಲಕ ಕವನ ಕಳುಹಿಸುವಂತಿಲ್ಲ. ಬರವಣಿಗೆ ಮೂಲಕ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬೇಕು. ಕವನಗಳ ಕೆಳಭಾಗದಲ್ಲಿ ಕವಿಗಳು-ಕವಯತ್ರಿಯರು ತಮ್ಮ ಹೆಸರು, ಪೂರ್ಣವಿಳಾಸ, ಮೊಬೈಲ್ ನಂಬರ್ ಇವುಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
ಆಸಕ್ತಿಯುಳ್ಳ ಕವಿಗಳು, ಕವಯತ್ರಿಯರು ತಮ್ಮ ಎರಡು ಸ್ವರಚಿತ ಪ್ರೇಮಕವನಗಳನ್ನು ಸ್ವ-ವಿಳಾಸವುಳ್ಳ ಪತ್ರದೊಂದಿಗೆ ಡಾ. ಭರ್ಯ ರಾಮಕುಮಾರ್, ಅಧ್ಯಕ್ಷರು, ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಅರ್ಕೇಶ್ವರನಗರ ಬಡಾವಣೆ, ಕೆ.ಆರ್.ನಗರ ಟೌನ್, ಮೈಸೂರು ಜಿಲ್ಲೆ. ಪಿನ್-೫೭೧೬೦೨ ಈ ವಿಳಾಸಕ್ಕೆ ತಾ. ೩೦ ರೊಳಗೆ ತಲುಪುವಂತೆ ಕಳುಹಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಡಾ. ಭರ್ಯ ರಾಮಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊ. ೯೪೪೯೬೮೦೫೮೩, ೬೩೬೩೧೭೨೩೬೮ ಈ ಸಂಖ್ಯೆಯನ್ನು ಸಂಪರ್ಕಿಸಬಹುದು.