ಗೋಣಿಕೊಪ್ಪಲು, ಜೂ. ೧೪: ಕಳೆದ ಮೂರು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಪೊನ್ನಂಪೇಟೆ ತಾಲೂಕು ಬಸ್ ಕಾರ್ಮಿಕರ ಸಂಘದ ವತಿಯಿಂದ ಸಂಘದಲ್ಲಿ ಸದಸ್ಯರಾಗಿ ಅಪಘಾತವೊಂದರಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ತಲಾ ೨೦ ಸಾವಿರ ನೆರವಿನ ಹಣವನ್ನು ವಿತರಿಸಲಾಯಿತು.
ಸಂಘದ ನಿರ್ಧಾರದಂತೆ ಅಧ್ಯಕ್ಷ ಎಂ.ಪಿ. ರಾಜ ಸಮ್ಮುಖದಲ್ಲಿ ಅಪಘಾತದಲ್ಲಿ ಮೃತಪಟ್ಟ ಪಾಲಿಬೆಟ್ಟದ ಸಂತೋಷ್ ಹಾಗೂ ವಿನಿತ್ ಇವರುಗಳಿಗೆ ತಲಾ ೨೦ ಸಾವಿರ ವಿತರಿಸಲಾಯಿತು. ವೀರಾಜಪೇಟೆ ಯಲ್ಲಿ ಹಲವು ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಮೃತಪಟ್ಟ ಜಕ್ರೀಯ ಅವರ ತಂದೆ ಪರವಾಗಿ ಜಕ್ರೀಯ ಅವರಿಗೆ ೧೦ ಸಾವಿರ ಹಣವನ್ನು ಸಂಘದ ವತಿಯಿಂದ ವಿತರಿಸಲಾಯಿತು.
ಪಾಲಿಬೆಟ್ಟದ ಸಂತೋಷ್ ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಬಸ್ ಮಾಲೀಕರಾದ ತಿಮ್ಮಯ್ಯ, ಸಿ.ಕೆ. ಗಣಪತಿ, ಶರೀನ್ ಬೆಳ್ಯಪ್ಪ, ಆಟೋ ಪಾರ್ಟ್ಸ್ನ ಮಾಲೀಕ ಗಿರಿಯವರು ಕೊಡೆ ಹಾಗೂ ಶಾಲಾ ಬ್ಯಾಗ್‌ಗಳನ್ನು ಇದೇ ವೇಳೆ ಸಂಘದ ಪರವಾಗಿ ಉಚಿತವಾಗಿ ನೀಡಿದರು. ಈ ವೇಳೆ ಸಂಘದ ಕಾರ್ಯದರ್ಶಿ ಆಲೀರ ಸಮ್ಮದ್, ಸಹಕಾರ್ಯದರ್ಶಿ ಶರೀನ್ ಬೆಳ್ಯಪ್ಪ ಗೌರವ ಅಧ್ಯಕ್ಷ ಬಿ.ಎನ್. ಪ್ರಕಾಶ್ ಹಾಜರಿದ್ದರು.