ಮಡಿಕೇರಿ, ಜೂ. ೧೫: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಪ್ರಯುಕ್ತ ಮಡಿಕೇರಿ ತಹಶೀಲ್ದಾರರ ನೇತೃತ್ವದಲ್ಲಿ ತಾ. ೧೮ ರಂದು ಬೆಳಿಗ್ಗೆ ೧೦ ಗಂಟೆಗೆ ತಹಶೀಲ್ದಾರರು ಮತ್ತು ಇತರ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಿಂದ ಮರಗೋಡು ಭಾರತಿ ಸಂಯುಕ್ತ ಪ್ರೌಢಶಾಲೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ. ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗೋಡು ವೃತ್ತಕ್ಕೆ ಒಳಪಡುವ ಮರಗೋಡು ಮತ್ತು ಎಸ್ ಕಟ್ಟೆಮಾಡು ಗ್ರಾಮಗಳ ಗ್ರಾಮಸ್ಥರ ಪಹಣಿ ದಾಖಲೆಗಳ ತಿದ್ದುಪಡಿ ಮತ್ತಿತರ, ಗ್ರಾಮದ ಪೌತಿ ಖಾತೆಗಳ ಕ್ರಮಗೊಳಿಸುವ ವಿಷಯ, ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ವಿಷಯ, ಆಹಾರ ಪಡಿತರ ಚೀಟಿಗೆ ಸಂಬAಧಿಸಿದ ವಿಷಯ, ಪೋಡಿ, ಅಳತೆ ವಿಚಾರಕ್ಕೆ ಸಂಬAಧಿಸಿದAತೆ, ಸ್ಮಶಾನ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಜಮೀನು ಕಾಯ್ದಿರಿಸುವಿಕೆ, ಸರ್ಕಾರಿ ಜಮೀನಿನ ಒತ್ತುವರಿ ವಿಚಾರಗಳು, ಆಧಾರ್ ಕಾರ್ಡಿಗೆ ಸಂಬAಧಿಸಿದAತೆ, ನಾಡ ಕಚೇರಿ, ಎಜೆಎಸ್ಕೆ. ಕೇಂದ್ರಗಳಲ್ಲಿ ನೀಡುವ ಸೇವೆಗಳ ಕುರಿತು, ಅತಿವೃಷ್ಟಿ ಪರಿಹಾರ ವಿಚಾರಗಳು ಮತ್ತು ಗ್ರಾಮದ ಸಮಸ್ಯೆಗಳು ಇತರೆ ವಿಷಯಗಳ ಬಗ್ಗೆ ಮರಗೋಡು ಭಾರತಿ ಸಂಯುಕ್ತ ಪ್ರೌಢಶಾಲೆಯಲ್ಲಿ ವಾಸ್ತವ್ಯ ಮಾಡಿ ಅರ್ಜಿಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಅಂತಿಮ ವಿಲೇವಾರಿ/ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಕ್ರಮವಹಿಸಲಿದ್ದಾರೆ ಎಂದು ತಾಲೂಕು ತಹಶೀಲ್ದಾರ್ ಪಿ.ಎಸ್. ಮಹೇಶ್ ತಿಳಿಸಿದ್ದಾರೆ.