ಕೂಡಿಗೆ, ಜೂ. ೧೫: ದನಗಳ ಸಾಕಾಣಿಕೆಯ ಮೂಲಕ ಹೈನುಗಾರಿಕೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ವಿಶೇಷ ನೆರವಿನ ಹೊಸ ಯೋಜನೆಯ ಮೂಲಕ ಜಿಲ್ಲಾ ಗಿರಿಜನ ಸಮನ್ವಯ ಯೋಜನೆ ಅಡಿಯಲ್ಲಿ ಉತ್ತಮ ಗುಣಮಟ್ಟದ ಹಸುಗಳನ್ನು ಖರೀದಿಸಲು ಸಹಾಯ ಧನದ ಪತ್ರವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳ ಮಹಿಳಾ ರೈತ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿಶೇಷ ಯೋಜನೆಯ ಅಡಿಯಲ್ಲಿ ಐದು ಅರ್ಹ ಮಹಿಳಾ ರೈತ ಫಲಾನುಭವಿಗಳಿಗೆ ರೂ. ೧,೨೦,೦೦೦ ಗಳವರೆಗೆ ಹಸುಗಳನ್ನು ಖರೀದಿಸಲು ಅವಕಾಶವನ್ನು ನೀಡಲಾಗಿದ್ದು, ಅದರಲ್ಲಿ ಮೊದಲು ಫಲಾನುಭವಿಗಳು ೩೦,೦೦೦ ರೂ.ಗಳನ್ನು ವಂತಿಗೆ ರೂಪದಲ್ಲಿ ನೀಡಬೇಕು. ಇವರಿಗೆ ಸಹಾಯ ಧನವಾಗಿ ೯೦,೦೦೦ ರೂ.ಗಳನ್ನು ಸರಕಾರ ಒದಗಿಸುತ್ತದೆ. ಇದರಿಂದಾಗಿ ಫಲಾನುಭವಿಗಳು ಉತ್ತಮ ಗುಣಮಟ್ಟದ ಹಸುಗಳನ್ನು ಖರೀದಿಸಿ ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸಿಕೊಂಡು ಆರ್ಥಿಕವಾಗಿ ಮುಂದುವರೆಯುವAತೆ ಸಲಹೆ ನೀಡಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ, ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಬಿಜೆಪಿ ವಕ್ತಾರ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಜಿ. ಮನು, ಕುಶಾಲನಗರ ಶಕ್ತಿ ಕೇಂದ್ರದ ಪ್ರಮುಖ್ ಶಿವಾಜಿ, ರೈತ ಮೋರ್ಚಾದ ತಾಲೂಕು ಅಧ್ಯಕ್ಷ ಜಗದೀಶ್, ರವಿ ಹಿತ್ತಲಕೇರಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಜರಿದ್ದರು.