ಮಡಿಕೇರಿ, ಜೂ. ೧೪: ಕೊಡಗು ಮೂಲದ

ಹಾಗೂ

ಮೈಸೂರಿನ

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ಡಾ. ಬೋಪಣ್ಣ ಬಲ್ಲಚಂಡ ಅಮೆರಿಕನ್ ಅಕಾಡೆಮಿ ಆಫ್ ಆಡಿಯೊಲಜಿ (ಎಎಎ)ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕೊಡಗಿನವರಾದ ಅವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ೧೯೭೦ನೇ ಬ್ಯಾಚ್‌ನ ವಿದ್ಯಾರ್ಥಿಯೂ ಆಗಿದ್ದರು. ನಂತರ, ಅವರು ಅಮೇರಿಕಾಕ್ಕೆ ತೆರಳಿ ಅಲ್ಲಿನ ಟೆಕ್ಸಾಸ್ ಹೆಲ್ತ್ ಸೈನ್ಸಸ್‌ನಲ್ಲಿ ಮುಖ್ಯ ಶ್ರವಣ ತಜ್ಞರಾಗಿ ೩೦ ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು. ಇದೀಗ ಅಮೇರಿಕಾದ ವಾಕ್ ಮತ್ತು ಶ್ರವಣ ಕ್ಷೇತ್ರದ ಅತ್ಯುನ್ನತ ಸ್ಥಾನ ಪಡೆದಿದ್ದಾರೆ.