ಸೋಮವಾರಪೇಟೆ, ಜೂ. ೧೫: ಇಲ್ಲಿನ ಬಿ.ಟಿ.ಸಿ.ಜಿ. ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೈಲಾ (೫೩) ಅವರು ತಾ. ೧೫ ರಂದು ಹೃದಯಾಘಾತದಿಂದ ನಿಧನರಾದರು.

ಹಾಕತ್ತೂರು ನಿವಾಸಿಯಾಗಿರುವ ಶೈಲಾ ಅವರು ಕಳೆದ ನಾಲ್ಕು ವರ್ಷಗಳಿಂದ ಬಿಟಿಸಿಜಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ದಿನ ಕಾಲೇಜಿಗೆ ಆಗಮಿಸಿ ಸಂಜೆ ಹೊಸಬೀಡು ಗ್ರಾಮದಲ್ಲಿರುವ ಪೋಷಕರ ಮನೆಗೆ ತೆರಳಿದ್ದ ಅವರಿಗೆ ಇಂದು ಬೆಳಿಗ್ಗೆ ಹೃದಯಾಘಾತವಾಗಿದೆ.

ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲು ಮುಂದಾದರೂ ಸಹ ಬದುಕುಳಿಯಲಿಲ್ಲ. ಮೃತರು ಪತಿ ಕುಡೆಕಲ್ಲು ಬಾಲಕೃಷ್ಣ ಸೇರಿದಂತೆ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.