ನಾಪೋಕ್ಲು: ಅಂರ‍್ರಾಷ್ಟಿçÃಯ ಕ್ರೀಡಾಕೂಟಕ್ಕೆ ಆಯ್ಕೆಯಾದ ನಾಪೋಕ್ಲು ಹೋಬಳಿ ಗ್ರಾಮ ಸಹಾಯಕ ಎರ್ಮ್ಮೆಕರ್ ಪ್ರಸಾದ್ ಅವರನ್ನು ಕೊಡಗು ಜಿಲ್ಲಾ ಗ್ರಾಮ ಸಹಾಯಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ವೀರಾಜಪೇಟೆ: ವೀರಾಜಪೇಟೆ ತಾಲೂಕು ನಗರಕ್ಕೆ ಸಮೀಪ ಆರಾಯಿರನಾಡ್ ಪೂಮಾಲೆ ಮಂದ್‌ನ ನಿರ್ವಾಹಕ ಆಡಳಿತ ಮಂಡಳಿ ವತಿಯಿಂದ ನಗರದ ಕಾವೇರಿ ಕಲ್ಯಾಣ ಮಂಟಪದ ಸನಿಹದ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮಚ್ಚಾರಂಡ ತಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಮ್ಮಯ್ಯ ಅವರಿಗೆ ಕೊಡಗಿನ ಸಂಪ್ರದಾಯಕ ಒಡಿಕತ್ತಿ ನೀಡಿ, ಶಾಲು ಹೊದಿಸಿ ಫಲತಾಂಬೂಲ ನೀಡಿ ಗೌರವಿಸಲಾಯಿತು.

ಪೂಮಾಲೆ ಮಂದ್‌ನ ಆಡಳಿತ ಮಂಡಳಿಯ ಉಪಾಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ ಅವರು ಮಾತನಾಡಿ, ತಮ್ಮಯ್ಯ ಅವರು ಜನಾಂಗದ ಏಳಿಗೆ ಮತ್ತು ಪೂಮಾಲೆ ಮಂದ್‌ನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ. ಇವರುಗಳು ನೀಡಿರುವ ಸೇವೆಯು ಅಮೋಘವಾದುದು ಎಂದರು.

ಕಾರ್ಯಕ್ರಮದಲ್ಲಿ ಆರಾಯಿರನಾಡ್ ಪೂಮಾಲ್ ಮಂದ್‌ನ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.ಪೊನ್ನಂಪೇಟೆ: ಕುಂದ ಈಚೂರು ಗ್ರಾಮದ ಶ್ರೀ ದಬ್ಬೆಚ್ಚಮ್ಮ ಜನಸಾಮಾನ್ಯರ ಸೇವಾ ಸಂಘದ ವತಿಯಿಂದ ಕೋವಿಡ್ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆ ಆಟ್ರಂಗಡ ರೋಹಿಣಿ ಹಾಗೂ ವಿಲೇಜ್ ನರ್ಸ್ ರೇಖಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಂದ ಗ್ರಾಮದ ಶ್ರೀ ಪಡುವೇರಿ ದಬ್ಬೆಚ್ಚಮ್ಮ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಟ್ರಂಗಡ ಜಿ. ಬೋಸು, ಉಪಾಧ್ಯಕ್ಷ ಕಲಿಯಂಡ ಕೆ. ಅಯ್ಯಪ್ಪ, ಕಾರ್ಯದರ್ಶಿ ನೆರವಂಡ ಪೆಮ್ಮಯ್ಯ, ಹಿರಿಯರಾದ ಕೆ.ಎಂ. ಕುಶಾಲಪ್ಪ, ಎಂ.ಕೆ. ಪೂವಯ್ಯ, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.ಮಡಿಕೇರಿ: ಕುಂದಚೇರಿ (ಚೆಟ್ಟಿಮಾನಿ) ಗ್ರಾ.ಪಂ.ಯಲ್ಲಿ ೧೧ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಪಿ. ಗೀತಾಂಜಲಿ ಅವರನ್ನು ಬೀಳ್ಕೊಡಲಾಯಿತು.

ಕುಂದಚೇರಿ (ಚೆಟ್ಟಿಮಾನಿ) ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗ ಪಿಡಿಓ ಅವರ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಿದರು.

ಉಪಾಧ್ಯಕ್ಷ ಕೆ.ವಿ. ಪ್ರವೀಣ್ ಕುಮಾರ್ ಹಾಗೂ ಗ್ರಾಮ ಲೆಕ್ಕಿಗರಾದ ಶ್ರದ್ಧಾ ಮಾತನಾಡಿ, ಗೀತಾಂಜಲಿ ಅವರ ಕರ್ತವ್ಯ ನಿಷ್ಠೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸದಸ್ಯರಾದ ದಿನೇಶ್, ಬಸಪ್ಪ, ಬೇಬಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಸವಿತ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯ ಕೆ.ಯು. ಹಾರಿಸ್ ಸ್ವಾಗತಿಸಿ, ದಮಯಂತಿ ರಾಣಿ ನಿರೂಪಿಸಿ, ಭುವನೇಶ್ವರಿ ವಂದಿಸಿದರು.