ಮಡಿಕೇರಿ, ಜೂ. ೧೫: ಭಾರತ ಸ್ವಾತಂತ್ರö್ಯದ ಅಮೃತ ಮಹೋತ್ಸವ ನೆನಪಿಗಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ೧೮೩೭ ರ ಸಂದರ್ಭದಲ್ಲಿ ನಡೆದ ‘ಅಮರ ಸುಳ್ಯ ಸ್ವಾತಂತ್ರ‍್ಯ ಹೋರಾಟ, ಕೊಡಗು-ಕೆನರಾ ಬಂಡಾಯ’ ಎಂಬ ವಿಷಯ ಕುರಿತ ಲೇಖನ ಸ್ಪರ್ಧೆಗೆ ಆಹ್ವಾನಿಸಲಾಗಿದೆ.
ನಿಯಮ ಇಂತಿದೆ: ಎ೪ ಹಾಳೆಯಲ್ಲಿ ೫ ಪುಟ ಮೀರದಂತೆ, ಕೈ ಬರಹದಲ್ಲಿರಬೇಕು. ಲೇಖನವನ್ನು ವಿದ್ಯಾರ್ಥಿಯ ಸಂಪೂರ್ಣ ವಿವರದೊಂದಿಗೆ ಕಾಲೇಜಿನಿಂದ ಮೊಹರು ಸಹಿತ ಸಂಬAಧಿಸಿದ ಕಾಲೇಜಿನ ಪ್ರಾಂಶುಪಾಲರ ಸಹಿಯೊಂದಿಗೆ ಕಳುಹಿಸಬೇಕು. ಲೇಖನ ಕಳುಹಿಸಲು ಜುಲೈ ೧೫ ಕೊನೆಯ ದಿನವಾಗಿದೆ.
ಲೇಖನವನ್ನು ಕಳುಹಿಸಿಕೊಡಬೇಕಾದ ವಿಳಾಸ ವಿವರ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಸೀಟು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ, ಆಯ್ಕೆಯಾದ ಲೇಖನಗಳಿಗೆ ಬಹುಮಾನ ನೀಡಲಾಗುವುದು ಮತ್ತು ಲೇಖನವನ್ನು ಅಕಾಡೆಮಿಯ ‘ಹಿಂಗಾರ’ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ರಿಜಿಸ್ಟಾçರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಸೀಟು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ, ಮೊ. ೬೩೬೨೫೨೨೬೭೭/ ಚಿಡಿebಚಿseಚಿಛಿಚಿಜemಥಿ@gmಚಿiಟ.ಛಿom ಸಂಪರ್ಕಿಸಬಹುದು.