ಮಡಿಕೇರಿ, ಜೂ. ೧೪: ಕೊಡಗು ಜಿಲ್ಲಾ ಬ್ಯಾಡ್‌ಮಿಂಟನ್ ಅಸೋಸಿ ಯೇಶನ್ ವತಿಯಿಂದ ಕೊಡಗು ಜಿಲ್ಲಾಮಟ್ಟದ ಶಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿ ಏರ್ಪಡಿಸ ಲಾಗಿದ್ದು, ತಾ. ೨೫ ಹಾಗೂ ೨೬ ರಂದು ಮಡಿಕೇರಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಕೊಡಗು ಬ್ಯಾಡ್‌ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಕೊರೊನಾ ಬಳಿಕ ಇದೇ ಪ್ರಥಮವಾಗಿ ಪಂದ್ಯಾವಳಿ ಆಯೋಜಿಸಲಾಗಿದ್ದು, ನಾಲ್ಕು ವಿಭಾಗಗಳಾಗಿ ವಿಂಗಡಿಸ ಲಾಗಿದೆ. ವಿಜೇತರಿಗೆ ಸುಮಾರು ಒಟ್ಟು ರೂ. ೧ ಲಕ್ಷದಷ್ಟು ಮೊತ್ತದ ಬಹುಮಾನ ನೀಡಲಾಗುತ್ತಿದೆ. ಮೆನ್ಸ್ ಓಪನ್ ಡಬಲ್ಸ್ನಲ್ಲಿ ವಿಜೇತರಾಗು ವವರಿಗೆ ಕ್ರಮವಾಗಿ ರೂ. ೧೫ ಸಾವಿರ, ೧೦ ಸಾವಿರ ಹಾಗೂ ೫ ಸಾವಿರ ಮತ್ತು ಟ್ರೋಫಿ ನೀಡಲಾಗುವದು. ಲೇಡೀಸ್ ಓಪನ್ ಡಬಲ್ಸ್ನಲ್ಲಿ ಗೆದ್ದವರಿಗೆ ೧೦ ಸಾವಿರ, ೪೦ ವರ್ಷ ಮೇಲ್ಪಟ್ಟ ಪುರುಷರಿಗೆ ೭೫೦೦, ೫೦ ವರ್ಷ ಮೇಲ್ಪಟ್ಟ ಪುರುಷರಿಗೆ ೫ ಸಾವಿರ ಮತ್ತು ಟ್ರೋಫಿ ನೀಡಲಾಗುವದು. ಪಂದ್ಯಾವಳಿಯಲ್ಲಿ ಭಾಗವಹಿಸುವವರು ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದ್ದು, ಅತಿಥಿಗಳಾಗಿ ಶಾಸಕ ಹಾಗೂ ಉಡುಪಿ ಜಿಲ್ಲಾ ಬ್ಯಾಡ್‌ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ರಘುಪತಿ ಭಟ್, ನಟ, ಉದ್ಯಮಿ ಮಾಚೆಟ್ಟಿರ ಜೆನಿತ್ ಅಯ್ಯಪ್ಪ ಉಪಸ್ಥಿತರಿರುವರೆಂದು ತಿಳಿಸಿದರು.

ಪಂದ್ಯಾವಳಿ ಕೊಡಗು ಜಿಲ್ಲೆಯ ಆಟಗಾರರಿಗೆ ಮಾತ್ರ ಸೀಮಿತ ವಾಗಿದ್ದು, ಆಧಾರ್ ಕಾರ್ಡ್ ತರುವದು ಕಡ್ಡಾಯವಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷ ನೆರವಂಡ ಜೀವನ್, ಕಾರ್ಯದರ್ಶಿ ಡಾ. ಎಂ.ಎ. ದೇವಯ್ಯ, ಸಮಿತಿ ಸದಸ್ಯೆ ಎಸ್.ಎಂ. ಜಯಂತಿ ಇದ್ದರು.