ವೀರಾಜಪೇಟೆ:ಜೂ:೧೪: ಈ ಹಿಂದೊಮ್ಮೆ ವಿದೇಶಿ ಪ್ರಜೆಯ ಸಹಿತ ಕೊಡಗು ಜಿಲ್ಲಾ ಮಡಿಕೇರಿಯಲ್ಲಿ ಅಪಾಯ ಹಾಗೂ ವಿಷಕಾರಿ ಎಂಡಿಎAಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಜಿಲ್ಲಾ ಅಪರಾಧ ಪತ್ತೆದಳದವರು ಬೆನ್ನಟ್ಟಿ ಕುಶಾಲನಗರದ ಬಳಿ ಸೆರೆ ಹಿಡಿದಿದ್ದರು. ಪ್ರಕರಣದ ತನಿಖೆಯ ಹಾದಿಯಲ್ಲಿರುವಾಗಲೇ ಇದೀಗ ಮತ್ತೆ ವೀರಾಜಪೇಟೆಯಲ್ಲಿ ಮತ್ತೊಂದು ಜಾಲ ಕಾರ್ಯೋನ್ಮುಖವಾಗಿದೆ. ಅದನ್ನೂ ಕೂಡ ಪೊಲೀಸರು ಭೇದಿಸಿದ್ದು ಎಂಡಿಎAಎ ಕ್ರೀಸ್ಟಲ್(ಮಾದಕ ಪದಾರ್ಥ) ಮತ್ತು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಐವರನ್ನು ಬಂಧಿಸಿರುವ ಘಟನೆ ವೀರಾಜಪೇಟೆ ನಗರದ ಸುಂಕದಕಟ್ಟೆಯಲ್ಲಿ ನಡೆದಿದೆ.
ವೀರಾಜಪೇಟೆ ಅಮ್ಮತ್ತಿ ಗ್ರಾಮದ ನಿವಾಸಿ ಕುಟ್ಟಂಡ ಬೋಪಣ್ಣ (೪೨), ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಪಂಚವಳ್ಳಿ ನಿವಾಸಿ ಜಬಿವುಲ್ಲಾ ಖಾನ್ (೪೧), ಕಡಂಗ ಅರಪಟ್ಟು ಗ್ರಾಮದ ನಿವಾಸಿ ಕೆ.ಎಸ್. ಫರೀದ್ (೨೨), ನಾಪೋಕ್ಲು ಕೊಟ್ಟಮುಡಿ ಗ್ರಾಮದ ನಿವಾಸಿ ಎಂ.ಕೆ.ಹೈದರ್ ಆಲಿ ಅಲಿಯಾಸ್ ಆಲಿಶಾಜ್ (೨೪) ಮತ್ತು ಅಮ್ಮತ್ತಿ ಕಾವಾಡಿ ಗ್ರಾಮದ ನಿವಾಸಿ ಕೆ.ವಿ.ಸುನೀಲ್ (೨೬) ಬಂಧಿತ ಆರೋಪಿಗಳು.
ಘಟನೆ ವಿವರ: ತಾ.೧೨ ರಂದು ರಾತ್ರಿ ಪ್ರಮುಖ ಆರೋಪಿಗಳಾಗಿರುವ ಬೋಪಣ್ಣ ಮತ್ತು ಜಬೀವುಲ್ಲಾ ಖಾನ್ ತಮಗಳ ಬಳಿಯಿರುವ ನಶೆ ಭರಿಸುವ ಮಾದಕ ವಸ್ತುವಾದ ಎಂಡಿಎAಎ ಕ್ರೀಸ್ಟಲ್,
(ಮೊದಲ ಪುಟದಿಂದ) ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಗಿರಾಕಿಗಳನ್ನು ಗೊತ್ತುಪಡಿಸಿ ವೀರಾಜಪೇಟೆ ನಗರದ ಸುಂಕದಕಟ್ಟೆ ಡೆಂಟಲ್ ಕಾಲೇಜು ಜಂಕ್ಷನ್ ಬಳಿ ಸ್ಥಳವನ್ನು ನಿಗದಿಗೊಳಿಸುತ್ತಾರೆ. ಈ ಸಂದÀರ್ಭದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೂವರು ಮಾರಾಟಗಾರರಿಂದ ವಸ್ತುಗಳನ್ನು ಖರೀದಿಸಿ ಇತರರಿಗೆ ಮಾರಾಟ ಮಾಡಲು ಮಾತುಕತೆ ಮಾಡಿದ್ದಾರೆ. ಮದ್ಯದ ಬಾಟಲಿನೊಂದಿಗೆ ಪಾರ್ಟಿ ಆರಂಭಿಸಿದ್ದಾರೆ. ಈ ವೇಳೆಯಲ್ಲಿ ಅನಾಮಿಕರ ಕರೆಯಿಂದ ನಗರ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣವೇ ಕಾರ್ಯಕ್ಕ್ಕಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ಅಕ್ರಮದಲ್ಲಿ ತೊಡಗಿದ್ದ ಆರೋಪಿಗಳಿಂದ ೭೬೦ ಗ್ರಾಂ ಗಾಂಜಾ ಮತ್ತು ಎಂಡಿಎAಎ ಕ್ರೀಸ್ಟಲ್ (ಮಾದಕ ಪದಾರ್ಥ) ೧೫.೫ ಗ್ರಾಂ, ಆರೋಪಿಗಳ ಬಳಿಯಿದ್ದ
೩೭೦೦ ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಐದು ಮೊಬೈಲ್ ದೂರವಾಣಿಗಳು ಮತ್ತು ಕೆಎ-೦೨-ಇಬಿ-೧೩೭೯ ಹಾಗೂ ಕೆಎ-೧೨ ಹೆಚ್-೯೫೩೦ ಎರಡು ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಲ್ಲಿ ಗಮನಾರ್ಹ ವಿಷಯವೆಂದರೆ ಎಂಡಿಎAಎ ಕ್ರೀಸ್ಟಲ್, ಮಾದಕ ವಸ್ತು ಗ್ರಾಂ ಒಂದಕ್ಕೆ ಮಾರುಕಟ್ಟೆಯಲ್ಲಿ ೩೦೦೦ ರೂ. ಎಂದು ಅಂದಾಜಿಸಲಾಗಿದೆ. ವಶಕ್ಕೆ ಪಡೆದಿರುವ ವಸ್ತು ಅಂದಾಜು ರೂ.೪೬,೫೦೦ ಬೆಲೆ ಬಾಳಲಿದೆ. ಗಾಂಜಾ ಒಟ್ಟು ೨೦,೦೦೦ ರೂಗಳಾಗಿವೆ, ಒಟ್ಟಾರೆ ಒಂದು ಲಕ್ಷ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಕುಟ್ಟಂಡ ಬೋಪಣ್ಣ ಮತ್ತು ಪಿರಿಯಾಪಟ್ಟಣದ ನಿವಾಸಿ ಜಬೀವುಲ್ಲಾ ಖಾನ್ ಈ ಹಿಂದೆ ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲಿ ಭಾಗಿಗಳಾಗಿ ಜೈಲುವಾಸ ಅನುಭವಿಸಿ ಹಿಂದಿರುಗಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪೊಲೀಸ್ ಅಧೀಕ್ಷಕ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಮತ್ತು ವೀರಾಜಪೇಟೆ ಉಪ ವಿಭಾಗ ಉಪಾಧೀಕ್ಷಕ ನಿರಂಜನ್ ರಾಜೇ ಅರಸ್ ಅವರುಗಳ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕÀ ಶಿವರುಧ್ರ
ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ನಗರ ಠಾಣೆಯ
ಠಾಣಾಧೀಕಾರಿ ಸಿ.ವಿ.ಶ್ರೀಧರ ಎ.ಎಸ್.ಐಗಳಾದ ಬಿ.ಎಂ. ಮೊಹಮ್ಮದ್, ಎಂ.ಎA.ಮೊಹಮ್ಮದ್ ಮತ್ತು ಸಿಬ್ಬಂದಿಗಳಾದ ಬಿ.ವಿ. ಸತೀಶ್, ಮಧು, ಸುಬ್ರಮಣಿ, ರವಿ, ಮುಸ್ತಾಫ, ಗಿರೀಶ್, ಕಿರಣ್ ಕುಮಾರ್, ರಜನ್ ಕುಮಾರ್, ಮಹಂತೇಶ್, ಸೆಟ್ಟಪ್ಪ ಭಾಗೇವಾಡಿ, ಸಂತೋಷ್ ದೊಡ್ಡಮನಿ, ಸಂಗಮೇಶ ಶಿವಪುರ, ಕೆ.ಎಂ. ಧರ್ಮ, ಸಾಗರ್, ಹಾಗೂ ಚಾಲಕರಾದ ರಮೇಶ್ ಅಭಿಷೇಕ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ