ಮಡಿಕೇರಿ, ಜೂ. ೧೫: ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಸಂಘವು ಅಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಹಾಗೂ ಶ್ರಮದಾನ ಚಟುವಟಿಕೆಗಳ ಮೂಲಕ ಒಕ್ಕಲಿಗ ಜನಾಂಗ ಹಾಗೂ ಇತರೆ ಸಮಾಜದ ಏಳಿಗೆಗಾಗಿ ಶ್ರಮಿಸುವ ಉದ್ದೇಶ ಸಂಘ ಹೊಂದಿದೆ.
ಸAಘದ ಅಧ್ಯಕ್ಷರಾಗಿ ಗಿರೀಶ್ ಮಲ್ಲಪ್ಪ, ಉಪಾಧ್ಯಕ್ಷರುಗಳಾಗಿ ಮಡಿಕೇರಿ ಭಾಗದಿಂದ ಕಡ್ಲೇರ .ಜಿ. ಕೀರ್ತನ್, ಕುಶಾಲನಗರ ಭಾಗದಿಂದ ಕೊಡಗನ ಹರ್ಷ, ವೀರಾಜಪೇಟೆ ಭಾಗದಿಂದ ಕಿರಣ್.ವಿ.ಸಿ. ಹಾಗೂ ಖಜಾಂಚಿಯಾಗಿ ಪೂಳಕಂಡ್ರ. ಎಂ. ಸಂದೀಪ್, ಗೌರವ ಕಾರ್ಯದರ್ಶಿಯಾಗಿ ನವೀನ್ ಅಜ್ಜಳ್ಳಿ, ಜಂಟಿ ಕಾರ್ಯದರ್ಶಿಯಾಗಿ ಲಿಖಿತ್ ಐಗೂರು,ಕಾನೂನು ಸಲಹೆಗಾರರಾಗಿ ದೀಪಕ್ .ಬಿ.ಜೆ. ಒಳಗೊಂಡAತೆ ೩೬ ಜನರ ಆಡಳಿತ ಮಂಡಳಿಯನ್ನು ಅವಿರೋಧವಾಗಿ ರಚಿಸಲಾಯಿತು. ಮಡಿಕೇರಿಯ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಸಮವಸ್ತ್ರವನ್ನು ಬಿಡುಗಡೆಗೊಳಿಸಿ, ಸಂಘದ ಸದಸ್ಯತ್ವ ಅಭಿಯಾನ ನಡೆಸಲು ನಿರ್ಧರಿಸಲಾಯಿತು.