ಕುಶಾಲನಗರ, ಜೂ. ೧೪: ಕುಶಾಲನಗರ ರಥಬೀದಿ ಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿ ಭಾನುವಾರ ನಡೆಯಿತು. ದೇವಾಂಗ ಸಂಘದ ಆಶ್ರಯದಲ್ಲಿ ನಡೆದ ವಾರ್ಷಿಕ ಮಹೋತ್ಸವ ಅಂಗವಾಗಿ ದೇವಿಗೆ ಅರ್ಚಕರಾದ ಪ್ರಸನ್ನ ಭಟ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರಗಿತು. ಬೆಳಿಗ್ಗೆ ಗಣಹೋಮ ನಡೆಯಿತು. ಗಂಗಾಜಲವನ್ನು ಮೆರವಣಿಗೆ ಮೂಲಕ ತರಲಾಯಿತು.

ಇದೇ ಸಂದರ್ಭ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಆಗಮಿಸಿ ಸಾಮೂಹಿಕವಾಗಿ ಫಲತಾಂಬೂಲ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ದೇವಾಂಗ ಸಂಘದ ಅಧ್ಯಕ್ಷ ಡಿ.ಟಿ. ವಿಜಯೇಂದ್ರ ಗೌರವಾಧ್ಯಕ್ಷ ಡಿ.ಜೆ. ರೇಣುಕುಮಾರ್, ಉಪಾಧ್ಯಕ್ಷ ಆರ್. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಮಹೇಶ್, ಪದಾಧಿಕಾರಿಗಳಾದ ಡಿ.ವಿ. ರಾಜೇಶ್. ಡಿ.ವಿ. ಚಂದ್ರು, ನಿರ್ದೇಶಕರುಗಳು ಹಾಗೂ ಸಲಹೆಗಾರರಾದ ಡಿ.ಎಸ್. ಜಗದೀಶ್, ಡಿ.ಎಸ್. ಕೋದಂಡರಾಮ, ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಇದ್ದರು.