ಸಿದ್ದಾಪುರ, ಜೂ. ೧೪: ನೂತನ ಹಿರಿಯ ಕಾರ್ಮಿಕ ನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಎಂ.ಸಿ ಮಾದಪ್ಪ ಅವರಿಗೆ ಕಾಫಿನಾಡು ಕಟ್ಟಡ ಕಾರ್ಮಿಕ ಸಂಘಟನೆಯಿAದ ಸ್ವಾಗತ ಕೋರಲಾಯಿತು.

ಸಂಘಟನೆ ಜಿಲ್ಲಾಧ್ಯಕ್ಷ ಕೆ.ವಿ. ಸುನಿಲ್ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎ. ಕೃಷ್ಣ ಕಚೇರಿಯಲ್ಲಿ ಭೇಟಿಯಾಗಿ ಸಂಘಟನೆಯ ನೂರನೇ ವರುಷದ ಸ್ಮರಣ ಸಂಚಿಕೆ ನೀಡಿ ಶುಭ ಕೋರಿದರು. ಪೊನ್ನಂಪೇಟೆ ತಾಲೂಕು ಡಿ.ಇ.ಓ. ಕಾವ್ಯ , ಬಿ.ಆರ್. ನವೀನ್ ಹಾಜರಿದ್ದರು.