ಮಡಿಕೇರಿ, ಜೂ. ೧೪: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಗ್ರಾಮದ ಧವಸ ಭಂಡಾರದ ಸಂಸ್ಥೆಗೆ ೧೦೦ ವರ್ಷದ ಸವಿನೆನಪಿಗಾಗಿ ಶಾಸಕರಾದ ಕೆ.ಜಿ. ಬೋಪಯ್ಯ ಅವರ ಮುತುವರ್ಜಿಯಿಂದ ಹೆರವನಾಡು ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರಾಗಿದೆ.
ತಾ. ೧೫ ರಂದು (ಇಂದು) ಸ್ಥಳೀಯ ಕಟ್ಟಡದಲ್ಲಿ ನ್ಯಾಯಬೆಲೆ ಅಂಗಡಿ ಕಾರ್ಯಾರಂಭ ಮಾಡಲಿದೆ. ಹೆರವನಾಡು, ರ್ವತ್ತೋಕ್ಲು ಗ್ರಾಮದ ಪಡಿತರ ಚೀಟಿ ಹೊಂದಿರುವವರು ನ್ಯಾಯಬೆಲೆ ಅಂಗಡಿಯ ಸದುಪಯೋಗ ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳು ಹಾಗೂ ಹೆರವನಾಡು ಧವಸ ಭಂಡಾರ ಆಡಳಿತ ಮಂಡಳಿ ಕೋರಿದೆ.