ಮಡಿಕೇರಿ, ಜೂ. ೧೩: ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನಿಯುಕ್ತಿಗೊಂಡಿರುವ ಕೊಡಗಿನವರಾದ ಚೆಪ್ಪುಡೀರ ಎಂ. ಪೂಣಚ್ಚ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಬೆಳಿಗ್ಗೆ ೧೦.೩೦ಕ್ಕೆ ಕೋರ್ಟ್ ಹಾಲ್ ೧ರಲ್ಲಿ ನಡೆದ ಸಮಾರಂಭದಲ್ಲಿ ಪೂಣಚ್ಚ ಅವರಿಗೆ ಮುಖ್ಯ ನ್ಯಾಯಮೂರ್ತಿಗಳಾದ ರಿತುರಾಜ್ ಅಶ್ವಥಿ ಅವರು ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ವಿವಿಧ ನ್ಯಾಯಾಧೀಶರುಗಳು ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು.

ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಪೂಣಚ್ಚ ಅವರನ್ನು ನೇಮಿಸುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದ್ದು, ಜೂನ್ ೮ರಂದು ಕೇಂದ್ರ ಸರಕಾರದ ಮೂಲಕ ಅಧಿಕೃತ ಆದೇಶವಾಗಿತ್ತು. ಇವರು ತಿತಿಮತಿ ಸನಿಹದ ನೊಕ್ಯ - ಸಿದ್ದಾಪುರ ಗ್ರಾಮದವರಾಗಿದ್ದಾರೆ.