ಮಡಿಕೇರಿ, ಜೂ. ೧೩ : ಪ್ರಸಕ್ತ (೨೦೨೨-೨೩) ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ‘ಅಡಿಕೆ ಹಳದಿ ರೋಗಕ್ಕೆ ಪರ್ಯಾಯ ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹಧನ’ ಕಾರ್ಯಕ್ರಮದಡಿ ಇತರೆ ವಾಣಿಜ್ಯ ತೋಟಗಾರಿಕೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು.

ಈ ಕಾರ್ಯಕ್ರಮದಡಿ ಮಡಿಕೇರಿ ತಾಲೂಕಿನ ಅಡಿಕೆ ಹಳದಿ ಎಲೆ ರೋಗ ಬಾಧಿತ ಪ್ರದೇಶಗಳಾದ ಸಂಪಾಜೆ, ಪೆರಾಜೆ, ಚೆಂಬು, ಕರಿಕೆ, ಗಾಳಿಬೀಡು ಮತ್ತು ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ರೈತರಿಗೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಶೇ.೫೦ ರಂತೆ ಸಹಾಯಧನ ಲಭ್ಯವಿರುತ್ತದೆ.

ಈ ಕಾರ್ಯಕ್ರಮದಡಿ ಒಂದು ಎಕರೆ ಪ್ರದೇಶ ವಿಸ್ತೀರ್ಣಕ್ಕೆ ಲಭ್ಯವಿರುವ ಸಹಾಯಧನ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳ ವಿವರ ಇಂತಿದೆ. ತೆಂಗು ರೂ. ೧೨,೦೮೫(೫೦ ಗಿಡಗಳಿಗೆ), ತಾಳೆ ರೂ. ೯೦೧೨ (೫೮ ಗಿಡ), ಕೋಕೊ ರೂ. ೧೬,೦೦೨ (೨೭೪ ಗಿಡ), ಗೇರು ರೂ. ೧೬,೯೬೫ (೧೧೧ ಗಿಡ), ಅಡಿಕೆಯಲ್ಲಿ ಕಾಳುಮೆಣಸು ರೂ. ೨೬,೪೫೭(೫೪೮ ಗಿಡ), ಅಂಗಾAಶ ಬಾಳೆ ರೂ. ೩೫೨೦೭ (೧೦೦೦ ಗಿಡ), ರಾಂಬೂಟನ್ ರೂ. ೧೩೮೨೦ (೬೨ ಗಿಡ), ದಾಲ್ಚಿನ್ನಿ/ ಚಕ್ಕೆ ರೂ. ೩೩೯೦೨ (೪೪೪ ಗಿಡ), ಲವಂಗ ರೂ. ೯೭೭೦ (೧೧೧ ಗಿಡ), ಜಾಯಿಕಾಯಿ ರೂ. ೮೫೮೯ (೧೬೦ ಗಿಡ), ಕಾಫಿ ಅರೆಬಿಕಾ ಎತ್ತರ ರೂ. ೩೩೩೩೫ (೧೨೦೦ ಗಿಡ), ಕಾಫಿ ಅರೆಬಿಕಾ ಗಿಡ ರೂ, ೪೮೫೨೬ (೧೭೭೭ ಗಿಡ), ಕಾಫಿ ರೋಬಸ್ಟ್ ರೂ.೧೩೪೬೧ (೪೪೪ ಗಿಡ), ಸಿಟ್ರಸ್ ಜಾತಿಯ ಬೆಳೆಗಳು ರೂ. ೧೪೭೬೮ (೧೧೧ ಗಿಡ) ಮತ್ತು ಬೆಣ್ಣೆಹಣ್ಣು ರೂ. ೨೪೧೪೯ (೧೧೧ ಗಿಡಗಳು) ಪ್ರತಿ ಫಲಾನುಭವಿಗೆ ಕನಿಷ್ಟ ೦.೨ ಹೆಕ್ಟೇರ್ (ಅರ್ಧ ಎಕರೆ) ಯಿಂದ ಗರಿಷ್ಟ ೪ ಹೆಕ್ಟರ್ (೧೦ ಎಕರೆ) ವರೆಗೆ ಸಹಾಯಧನವನ್ನು ನೀಡಬಹುದಾಗಿದೆ. ಈ ಯೋಜನೆಯ ಸಹಾಯಧನ ಪಡೆಯಲು ಎಲ್ಲಾ ವರ್ಗದ ರೈತರು ಅರ್ಹರಾಗಿದ್ದಾರೆ.

ಅರ್ಜಿ ನಮೂನೆಗಳು ಸಂಪಾಜೆ, ಪೆರಾಜೆ, ಚೆಂಬು, ಕರಿಕೆ, ಗಾಳಿಬೀಡು ಮತ್ತು ಮದೆನಾಡು ಗ್ರಾಮ ಪಂಚಾಯತ್‌ಗಳಲ್ಲಿ ಲಭ್ಯವಿದ್ದು, ರೈತರು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು ಇಂತಿವೆ. ರೈತರ ಜಮೀನಿನ ಪಹಣಿ ಪತ್ರ (೨೦೨೨ನೇ ಸಾಲಿನದ್ದು), ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರಿಂದ ಒಪ್ಪಿಗೆ ಪತ್ರ. ರೈತರ ಆಧಾರ್‌ಕಾರ್ಡ್ ಪ್ರತಿ ಮತ್ತು ಫೋಟೋ (ಪಾಸ್‌ಪೋರ್ಟ್ ಅಳತೆ). ರೈತರ ರಾಷ್ಟಿçÃಕೃತ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ. ಗಿಡಗಳನ್ನು ಖರೀದಿಸಿದ ಮೂಲ ಬಿಲ್ಲು (ತೋಟಗಾರಿಕೆ ಇಲಾಖೆ ನರ್ಸರಿಗಳಿಂದ / ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿAದ ದೃಢೀಕರಿಸಿದ ನರ್ಸರಿಗಳಿಂದ ಮಾತ್ರ). ಸಸ್ಯ ಸಂರಕ್ಷಣಾ ಔಷಧಿ ಹಾಗೂ ಜೈವಿಕ, ರಾಸಾಯನಿಕ, ಗೊಬ್ಬರ ಖರೀದಿಸಿದ ಜಿ.ಎಸ್.ಟಿ. ಸಂಖ್ಯೆಯುಳ್ಳ ಮೂಲ ಬಿಲ್ಲು. ಅರ್ಜಿ ಸಲ್ಲಿಸಲು ಜೂನ್, ೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ, ಮಡಿಕೇರಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಅವರನ್ನು ಸಂಪರ್ಕಿಸಬಹುದು ಎಂದು ಉಪ ನಿರ್ದೇಶಕ ಪ್ರಮೋದ್ ಅವರು ತಿಳಿಸಿದ್ದಾರೆ.