ಗೋಣಿಕೊಪ್ಪಲು, ಜೂ. ೧೩: ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿ ರುವ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಸುಮಾರು ೪೦೦ಕ್ಕೂ ಅಧಿಕ ಆಟೋರಿಕ್ಷಾಗಳು ಪ್ರತಿದಿನ ಹಗಲು-ರಾತ್ರಿ ಎನ್ನದೆ ಸಂಚಾರ ನಡೆಸುತ್ತಿವೆ. ಆಟೋ ರಿಕ್ಷಾವನ್ನೇ ನಂಬಿಕೊAಡು ತಮ್ಮ ಕುಟುಂಬದ ನಿರ್ವಹಣೆ ಮಾಡು ವವರು ಅಧಿಕ ಮಂದಿ ನಗರದಲ್ಲಿ ವಾಸವಾಗಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದುಕೊಂಡು ಪ್ರತಿನಿತ್ಯ ಆಟೋದಿಂದಲೇ ಇವರ ಜೀವನ ನಿರ್ವಹಣೆ ನಡೆಯುತ್ತಿದೆ.

ಗೋಣಿಕೊಪ್ಪ ನಗರವು ಪ್ರಮುಖ ಪಟ್ಟಣವಾಗಿರುವುದರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ನಗರದ ಸುತ್ತಮುತ್ತಲಿನ ಬಡಾವಣೆಗಳಿಗೆ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಪ್ರಯಾಣಿಕರು ತೆರಳುತ್ತಾರೆ. ಗ್ರಾಮೀಣ ಪ್ರದೇಶಕ್ಕೆ ಸೂಕ್ತ ಬಸ್‌ನ ವ್ಯವಸ್ಥೆ ಇಲ್ಲದಿರುವುದರಿಂದ ಸಹಜವಾಗಿಯೇ ಅನೇಕ ಮಂದಿ ಆಟೋರಿಕ್ಷಾ ಸಹಾಯ ಪಡೆಯುತ್ತಿದ್ದಾರೆ. ಆದರೆ ಇದರ ದುರ್ಲಾಭ ಪಡೆದಿರುವ ಗೋಣಿಕೊಪ್ಪಲುವಿನ ಹಲವು ಆಟೋರಿಕ್ಷಾ ಚಾಲಕರು ಮುಗ್ದ ಪ್ರಯಾಣಿಕರಿಂದ ಮನಬಂದAತೆ ಬಾಡಿಗೆ ವಸೂಲಿ ಮಾಡುತ್ತಿರುವುದು ಇತ್ತೀಚಿನ ದಿನದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.

ಆಟೋ ರಿಕ್ಷಾಗಳಲ್ಲಿ ನಿಗದಿತ ದರ ಪಟ್ಟಿಯನ್ನು ಅಳವಡಿಸದೆ ಹಾಗೂ ಸೂಕ್ತ ದಾಖಲಾತಿಗಳನ್ನು ಹೊಂದಿಲ್ಲದ ಅನೇಕ ಆಟೋರಿಕ್ಷಾಗಳು ರಸ್ತೆಗಿಳಿದಿವೆ. ಅಲ್ಲದೆ ಹಲವು ವರ್ಷಗಳ ಹಿಂದೆ ಇದ್ದಂತಹ ದರ ಪಟ್ಟಿಯನ್ನು ಆಟೋರಿಕ್ಷಾದಿಂದ ತೆಗೆಯಲಾಗಿದೆ. ನಗರದಲ್ಲಿ ಏಕಮುಖ ಸಂಚಾರವನ್ನೇ ಗುರಿಯಾಗಿಸಿಕೊಂಡಿರುವ ಕೆಲವು ಆಟೋರಿಕ್ಷಾ ಚಾಲಕರು ನಗರದ ಬಡಾವಣೆಗಳಿಗೆ ತೆರಳುವ ನಾಗರಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಕಳೆದ ವರ್ಷ ಇಲಾಖೆಯು ಕನಿಷ್ಟ ದರವನ್ನು ರೂ. ೨೫ಕ್ಕೆ ನಿಗದಿಪಡಿಸಿತ್ತು. ನಂತರ ಪೆಟ್ರೋಲ್ ಬೆಲೆ ಅಧಿಕಗೊಂಡ ವೇಳೆ ಈ ದರವನ್ನು ಆಟೋಚಾಲಕರೇ ರೂ. ೩೦ಕ್ಕೆ ಏರಿಸಿಕೊಂಡಿದ್ದರು. ಇದೀಗ ಈ ದರವು ರೂ. ೪೦ ರಿಂದ ರೂ. ೬೦ ವರೆಗೆ ಬಂದು ನಿಂತಿದೆ. ನಗರದ ಬಡಾವಣೆಗಳು ಕೇವಲ ೧.೫ ಕಿ.ಮೀ. ವ್ಯಾಪ್ತಿಯಲ್ಲಿದ್ದರೂ ಆಟೋರಿಕ್ಷಾಗಳು ರೂ. ೫೦ ರಿಂದ ೬೦ ಪಡೆಯುತ್ತಿದ್ದಾರೆ. ರಾತ್ರಿ ೯ ಗಂಟೆ ನಂತರ ಈ ಹಣವು ದ್ವಿಗುಣ ವಾಗುತ್ತಿದೆ.

ಹಲವು ಆಟೋರಿಕ್ಷಾಗಳು ಯಾವುದೇ ದಾಖಲಾತಿಯನ್ನು ಹೊಂದದೆ ರಸ್ತೆಗಿಳಿದು ಬಾಡಿಗೆ ಮಾಡುತ್ತಿದೆ. ಇದರಿಂದ ಅಮಾಯಕ ಪ್ರಯಾಣಿಕರು ಆಟೋದಲ್ಲಿ ಸಂಚರಿಸುವ ವೇಳೆ ಅಪಘಾತಗಳು ಸಂಭವಿಸಿದರೆ ಇದರ ನಷ್ಟವನ್ನು ತುಂಬುವರಿಲ್ಲದAತಾಗಿದೆ. ಪಟ್ಟಣದ ನಿಲ್ದಾಣದಲ್ಲಿ ಹಲವೆಡೆ ಆಟೋರಿಕ್ಷಾಗಳ ನಿಲುಗಡೆಗೆ ನಿಲ್ದಾಣಗಳಿದ್ದರೂ ಬಹುತೇಕ ಆಟೋರಿಕ್ಷಾಗಳು ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆ ಹಾಗೂ ಮಾರುಕಟ್ಟೆ ಏಕಮುಕ ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ ನಿಲುಗಡೆಯಾಗುತ್ತಿದೆ. ಇದರಿಂದ ಇತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ತೊಡಕುಂಟ್ಟಾಗುತ್ತಿದೆ.

ನಗರದ ಪೊಲೀಸರು ಈ ಹಿಂದೆ ಆಟೋರಿಕ್ಷಾಗಳನ್ನು ತಪಾಸಣೆಗೆ ಒಳಪಡಿಸಿ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದರು. ಇದೀಗ ಕಳೆದ ಆರು ತಿಂಗಳಿನಿAದ ಪೊಲೀಸರು ಆಟೋರಿಕ್ಷಾಗಳನ್ನು ತಪಾಸಣೆಗೆ ಒಳಪಡಿಸದೇ ಇರುವುದನ್ನು ಮನಗಂಡು ಬಹುತೇಕ ಆಟೋರಿಕ್ಷಾಗಳು ದಾಖಲಾತಿ ಇಲ್ಲದೆ ರಸ್ತೆ ಗಿಳಿಯುತ್ತಿವೆ. ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಆಟೋರಿಕ್ಷಾಗಳ ದಾಖಲಾತಿ ಗಳನ್ನು ಪರೀಕ್ಷೆ ಗೊಳಪಡಿಸಬೇಕು ಹಾಗೂ ನಿಗದಿತ ದರ ಪಟ್ಟಿಯನ್ನು ಆಟೋರಿಕ್ಷಾದಲ್ಲಿ ಅಳವಡಿಸಲು ನಾಗರಿಕರು ಒತ್ತಾಯಿಸಿದ್ದಾರೆ.

- ಹೆಚ್.ಕೆ. ಜಗದೀಶ್, ಗೋಣಿಕೊಪ್ಪಲು